ಮಂಗಳೂರು: ನಗರದಲ್ಲಿ ಸಕ್ರಿಯವಾಗಿದ್ದ ಗಾಂಜಾ ಮಾರಾಟ ಜಾಲವೊಂದನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆ. 21ರಂದು ಕಾಸರಗೋಡಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಬೊಲೆರೊ ಪಿಕಪ್ ವಾಹನವನ್ನು ರಾ.ಹೆ.66ರ ಪಂಪುವೆಲ್ ಬಳಿಯ ತಾರೆತೋಟ ಎಂಬಲ್ಲಿ ಪೊಲೀಸರು ತಡೆದು, ಆರೋಪಿಗಳಿಂದ ಬರೋಬ್ಬರಿ 132 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ವರ್ಕಾಡಿ ಪಾವೂರಿನ ಕಲಂದರ್ ಮಹಮ್ಮದ್ ಮತ್ತು ಕುಂಜತ್ತೂರಿನ ಮೊಹಿದಿನ್ ಅನ್ಸಾರ್ ಎಂದು ಗುರುತಿಸಲಾಗಿದೆ.
ಪಿಕಪ್ ವಾಹನವನ್ನು ಹಿಂಬಾಲಿಸುತ್ತಿದ್ದ ಸ್ವಿಫ್ಟ್ ಕಾರು ಸಹಿತ ಅಂದಾಜು 43 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.