ಉಡುಪಿ: ನಗರದ ಹೃದಯ ಭಾಗದಲ್ಲಿರುವ ಮಾಂಡವಿ ಏಕ್ರೋಪೊಲಿಸ್ ನ ನಿವಾಸಿಗಳೆಲ್ಲರೂ ಸೇರಿ ನಡೆಸಿದಂತಹ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮ ಬೈಲೂರು ಮಹಿಷಿ ಮರ್ದಿನಿ ಶಾಲೆಯ ಬಳಿ ಇರುವ ಗದ್ದೆಯಲ್ಲಿ ಅತ್ಯಂತ ಅದ್ದೂರಿಯಾಗಿ ಜರಗಿತು.
ಮಾಂಡವಿ ಬಿಲ್ಡರ್ಸ್ ನ ಪ್ರಮುಖರಾದ ಜೆರ್ರಿ ವಿನ್ಸೆಂಟ್ ಡಯಾಸ್ ಅವರು ತೆಂಗಿನ ಗರಿಯ ಹೂವನ್ನು ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಾಂಡವಿ ಏಕ್ರೋಪೊಲಿಸ್ ಸೊಸೈಟಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ಕೆಸರಿನ ಆಟದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ಲೆಂಡ್ ಡಯಾಸ್, ರಾಘವ ನಾಯಕ್ ಸ್ಥಳದ ಮಾಲೀಕ ರಂಗನಾಥ್ ಹಾಗೂ ವೆಂಕಟೇಶ್ ಅವರು ಉಪಸ್ಥಿತರಿದ್ದರು.
ಸೊಸೈಟಿಯ ಉಪಾಧ್ಯಕ್ಷ ಸತೀಶ್ ಹೆಗ್ಡೆ ‘ವಂದೇ ಮಾತರಂ’ ಹಾಡನ್ನು ಸಂಯೋಜಿಸಿ ಹಾಡಿದರು.
ಕಾರ್ಯಕ್ರಮದ ಆಟೋಟ ಸ್ಪರ್ಧೆಯನ್ನು ಮತ್ತು ವೇದಿಕೆಯ ಅಲಂಕಾರವನ್ನು ದಿವಾ ನಂಬಿಯಾರ್, ಅಮೀತ್ ಪಡುಕೋಣೆ ನಿರ್ವಹಿಸಿದರು.
ಕಟ್ಟಡದ ನಿವಾಸಿಗಳಾದ ಲಾನ್ಸಿ ಡಯಾಸ್, ನವೀನ್ ಶೇಟ್, ಫೈಯಲ್, ಮುಸ್ತಾಫ ಗುಂಡ್ಮಿ, ಪ್ರತಾಪ್, ವಕೀಲರಾದ ಇಕ್ಬಾಲ್, ಉಮಾ ಸುವರ್ಣ, ಡಾ.ಶರತ್, ಸಂಪತ್ ಶೆಟ್ಟಿ, ದರ್ಶಿತ್ ಶೆಟ್ಟಿ, ಹಾಗೂ ಮಾಂಡವಿ ಏಕ್ರೋಪೊಲಿಸ್ ನ ಎಲ್ಲಾ ನಿವಾಸಿಗಳು ಭಾಗವಹಿಸಿದ್ದರು.