ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ರಥೋತ್ಸವ ಸಂಭ್ರಮ

ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶನಿವಾರ ಕೆಂಡೋತ್ಸವ, ರವಿವಾರ ಶ್ರೀ ಮನ್ಮಹಾರಥೋತ್ಸವ ಸಂಭ್ರಮದಿಂದ ಜರಗಿತು.

ಶನಿವಾರದಂದು ಕುಂಭ ಸಂಕ್ರಮಣ, ರಾತ್ರಿ ಕೆಂಡ ಸೇವೆ ನೆರವೇರಿತು.

ರವಿವಾರ ಮಧ್ಯಾಹ್ನ ರಥಾವರೋಹಣ, ತಾಲೀಮು, ಸಂಜೆ ರಥೋತ್ಸವ, ಆಕರ್ಷಕ ಸುಡುಮದ್ದು ಪ್ರದರ್ಶನ ನೆರವೇರಿತು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತಾರು ಪಾಲ್ಗೊಂಡಿದರು.

ಕೆಂಡಸೇವೆ ಮತ್ತು ರಥೋತ್ಸವ ಪ್ರಯುಕ್ತ ಮಹಾ ಅನ್ನಸಂತರ್ಪಣೆ ಜರಗಿತು.

ಕಾರ್ಯನಿರ್ವಹಣ ಅಧಿಕಾರಿ ಎಸ್.ಪಿ.ಬಿ. ಮಹೇಶ, ಅನುವಂಶಿಕ ಮೊಕ್ತೇಸರರಾದ ಧನಂಜಯ ಶೆಟ್ಟಿ, ಸುರೇಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ, ಎಚ್. ಶಂಭು ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, ಅರ್ಚಕ ವೃಂದ, ಸಿಬ್ಬಂದಿ ಉಪಸ್ಥಿತರಿದ್ದರು.