ಮಂಚಿ: ಪೂರ್ಣಪ್ರಜ್ಞ ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್ ಘಟಕದಿಂದ ಸಮುದಾಯ ಸೇವಾ ಶಿಬಿರ

ಮಣಿಪಾಲ: ಪೂರ್ಣಪ್ರಜ್ಞಾ ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್ ಘಟಕದ ವತಿಯಿಂದ ಒಂದು ದಿನದ ಸಮುದಾಯ ಸೇವಾ ಶಿಬಿರವನ್ನು ಶನಿವಾರ ಮಂಚಿ ರಾಜೀವನಗರ ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು.

ಸೇವಾ ಶಿಬಿರದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ, ಸ್ವಚ್ಛತಾ ಕಾರ್ಯಕ್ರಮ, ಹೆಣ್ಣು ಮಕ್ಕಳ ರಕ್ಷಣೆ ಕುರಿತಾದ ಜಾಥಾ ಮತ್ತು ಪರಿಸರ ಸ್ವಚ್ಛತೆ ಹಾಗೂ ನೈರ್ಮಲ್ಯದ ಸಮೀಕ್ಷೆಯನ್ನು ಕೈಗೊಳ್ಳಲಾಯಿತು.

ಈ ಶಿಬಿರವನ್ನು ಮಂಚಿ ವಾಸುಕಿ ನಾಗಯಕ್ಷಿ ಟ್ರಸ್ಟ್ ನ ಅಧ್ಯಕ್ಷ ಶಾಂತರಾಮ ಶೆಟ್ಟಿ ಉದ್ಘಾಸಿದರು. ಟ್ರಸ್ಟ್ ನ ಕಾರ್ಯದರ್ಶಿ ವಿಶ್ವ ಮೂರ್ತಿ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಪ್ಲೊಸಿ ಫೆರ್ನಾಂಡಿಸ್, ಸುಭೋದಿನಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ ನಾಯಕಿ ರೇಖಾ ಆಚಾರ್ಯ ರಾಜೀವನಗರ ಉಪಸ್ಥಿತರಿದ್ದರು.

ಈ ಶಿಬಿರವನ್ನು ರೇಂಜರ್ಸ್ ಘಟಕದ ನಾಯಕಿ ಜ್ಯೋತಿ ಆಚಾರ್ಯ ಆಯೋಜಿಸಿದರು. ಉಪನಾಯಕಿ ಪ್ರತಿಭಾ ಭಟ್ ಮತ್ತು ರೋವರ್ ಘಟಕದ ನಾಯಕ ಸಂತೋಷ್ ಕುಮಾರ್ ಸಹಕರಿಸಿದರು.

ಶಿಬಿರದಲ್ಲಿ 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಕೆರೆ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಸುಮಾರು 75 ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.