ಉಡುಪಿ: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ತ್ರಿವರ್ಣ ಕಲಾ ಕೇಂದ್ರ ಮಣಿಪಾಲದ ಹಿರಿಯರ ವಿಭಾಗದ ಮಹಿಳಾ ವಿದ್ಯಾರ್ಥಿ ಕಲಾವಿದರಿಂದ ಮಲ್ಪೆ ಕಡಲ ತೀರದಲ್ಲಿ ಭಾನುವಾರ ಸಂಜೆ ರಚಿಸಲಾದ ‘ವಿ ಆರ್ ದ ಪವರ್’ ಸಂದೇಶದಡಿ ಸುಮಾರು 20 ಅಡಿ ಅಗಲ ಮತ್ತು 3.5 ಅಡಿಯ ಮರಳು ಶಿಲ್ಪ ಪ್ರವಾಸಿಗರ ಗಮನಸೆಳೆಯಿತು.
ಶಿಕ್ಷಣವೇ ಪ್ರಧಾನವೆಂಬಂತೆ ಪುಸ್ತಕದಿಂದ ಎದ್ದು ಬಂದ ಮಹಿಳೆಯನ್ನು ಕೇಂದ್ರೀಕೃತವಾಗಿರಿಸಿಕೊಂಡು, ಮಹಿಳೆಯ ಪಾತ್ರ ಮತ್ತು ಅವಳ ವಿವಿಧ ವೃತ್ತಿಯೊಂದಿಗೆ ಸಮಾನವಾಗಿ ನಿಭಾಯಿಸಬಲ್ಲ ಶಕ್ತಿ ತೋರಿಸುವ ಸಂದೇಶದಡಿ ಮರಳು ಶಿಲ್ಪ ರಚಿಸಲಾಗಿತ್ತು.
ಕಲಾವಿದ ಹರೀಶ್ ಸಾಗ ಮಾರ್ಗದರ್ಶನದಲ್ಲಿ ಮರಳು ಶಿಲ್ಪ ಮೂಡಿಬಂದಿದ್ದು, ಕಡಲ ಕಿನಾರೆಗೆ ಆಗಮಿಸಿದ ಪ್ರವಾಸಿಗರನ್ನು ಆಕರ್ಷಿಸಿತು.