ಸೈಂಟ್ ಮೇರಿಸ್ ದ್ವೀಪಕ್ಕೆ ಯಾನ ಹೊರಟಿದೆ ಮಲ್ಪೆ ಶ್ರೀ ರಾಜರಾಜೇಶ್ವರಿ ಟೂರಿಸ್ಟ್ ಮತ್ತು ಅನುಷ್ಕ ಟೂರಿಸ್ಟ್ ಬೋಟ್

ಉಡುಪಿ: ಮಲ್ಪೆ ಸೀ ವಾಕ್ ವೇ ಪಾಯಿಂಟ್ ಹತ್ತಿರವಿರುವ ಶ್ರೀರಾಜರಾಜೇಶ್ವರಿ ಟೂರಿಸ್ಟ್ ಹಾಗೂ ಅನುಷ್ಕಾ ಟೂರಿಸ್ಟ್ ಬೋಟುಗಳು ನಿರಂತರ ಸುರಕ್ಷಿತವಾಗಿ ಪ್ರಯಾಣಿಕರಿಗೆ ಸೈಂಟ್ ಮೇರಿಸ್ ದ್ವೀಪ ಯಾನದ ಸೇವೆಯನ್ನು ನೀಡುತ್ತಿದ್ದು ಪ್ರಯಾಣಿಕರ, ಪ್ರವಾಸಿಗರ ಅಪಾರ ಮೆಚ್ಚುಗೆ ಗಳಿಸಿದೆ.
ಆನಂದಿಸಿ ದ್ವೀಪಯಾನದ ವಿಹಾರ:
ಈ ಬೋಟ್ ಗಳ ಸೇವೆಯನ್ನು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ ಸೇವೆಯನ್ನು ನೀಡುತ್ತಿದೆ. ವಾರದ್ಯಂತ ಸೇವೆಗಳು ಲಭ್ಯವಿದ್ದು, ಒಂದು ಟ್ರಿಪ್ ನಲ್ಲಿ ಕನಿಷ್ಠ 30 ಜನಗಳನ್ನು ಹೊಂದಿದೆ. ಲೈಫ್ ಜಾಕೆಟ್ ಕಡ್ಡಾಯವಾಗಿ ದರಿಸಬೇಕು. ಬೋಟಿನಲ್ಲಿ ಆಲ್ಕೋಹಾಲ್ ಸಂಪೂರ್ಣವಾಗಿ ಸೇವಿಸುವುದು ನಿಷೇಧಿಸಿದೆ.
ಟಿಕೇಟು ದರ 10 ವರ್ಷಕ್ಕಿಂತ ಮೇಲ್ಪಟ್ಟವರಿಗೆ  250 ರೂ. ಹಾಗೂ 3-10 ವರ್ಷದೊಳಗಿನ ಮಕ್ಕಳಿಗೆ 150 ರೂ. ವಿಧಿಸಿದೆ.
ಪ್ರತಿದಿನ ಕನಿಷ್ಠ 15 ಜನರ ಗುಂಪೊಂದನ್ನು, 10:30 ಹಾಗೂ 3:30 ಕ್ಕೆ 2 ಟ್ರಿಪ್ಸ್ ಮಾಡಿ ಬೋಟುಗಳನ್ನು ಬಿಡಲಾಗುವುದು. ಈ ಸೇವೆಯು ಶನಿವಾರ, ಆದಿತ್ಯವಾರ ಹಾಗೂ ಸರಕಾರಿ ರಜಾ ದಿನಗಳಲ್ಲಿ ಇರುವುದಿಲ್ಲ. ಬೇರೆಲ್ಲ ದಿನಗಳಲ್ಲಿ ಈ ಸೇವೆಯು ಲಭ್ಯವಿರುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.