ಉಡುಪಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೇಜಾರು ಸಮೀಪದ ಕೆಳಾರ್ಕಳಬೆಟ್ಟು ಎಂಬಲ್ಲಿ ಸಂಭವಿಸಿದೆ.
ಕೆಳಾರ್ಕಳಬೆಟ್ಟು ನಿವಾಸಿ ಜಯಂತಿ ಎಸ್ ಅವರ ಮಗ ಸ್ವಸ್ತಿಕ್ (16) ಮೃತ ವಿದ್ಯಾರ್ಥಿ. ಸ್ವಸ್ತಿಕ್ ಉಡುಪಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದನು. ಜುಲೈ 27ರಂದು ಜಯಂತಿ ಅವರು ತನ್ನ ಮಗಳ ಮೆಡಿಕಲ್ ಸರ್ಟಿಫಿಕಟ್ ತರಲು ನೇಜಾರಿಗೆ ಹೋಗಿ ವಾಪಾಸ್ಸು ಮನೆಗೆ ಬಂದು ನೋಡಿದಾಗ ಸ್ವಸ್ತಿಕ್ ಮನೆಯ ಹಾಲ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












