ಮಲ್ಪೆ ಬಂದರಿನ ಬೇಸಿನ್, ನೇವಿಗೇಶನ್ ಚಾನೆಲ್ ನಿರ್ವಹಣಾ ಹೂಳೆತ್ತುವಿಕೆ ಕಾಮಗಾರಿ: ಶಾಸಕ ರಘುಪತಿ ಭಟ್ ಪರಿಶೀಲನೆ
ಮಲ್ಪೆ: ಇಲ್ಲಿನ ಮೀನುಗಾರಿಕೆ ಬಂದರಿನ ಬೇಸಿನ್ ಹಾಗೂ ನೇವಿಗೇಶನ್ ಚಾನೆಲ್ ನಿರ್ವಹಣಾ ಹೂಳೆತ್ತುವಿಕೆ ಕಾಮಗಾರಿ ನಡೆಯುತ್ತಿದ್ದು, ಇಂದು ಶಾಸಕ ಕೆ. ರಘುಪತಿ ಭಟ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.