ಉಡುಪಿ: ಎರಡು ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡು ರಾಜ್ಯದ ಜನತೆಯ ಗಮನ ಸೆಳೆದಿದ್ದ ರಾಜ್ಯದ ಪ್ರಪ್ರಥಮ ತೇಲುವ ಸೇತುವೆ ಗಾಳಿಯ ರಭಸಕ್ಕೆ ಸಿಕ್ಕು, ಚೂರುಗಳಾಗಿ ಬೇರ್ಪಟ್ಟು, ಸಮುದ್ರದೆಲ್ಲೆಡೆ ತೇಲುತ್ತಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಉದ್ಗಾಟನೆಗೊಂಡ ತೇಲುವ ಸೇತುವೆ ಕೇವಲ ಎರಡೇ ದಿನಗಳಲ್ಲಿ ತುಂಡಾಗಿ ದಿಕ್ಕಾಪಾಲಾಗಿ ತೇಲುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಮಲ್ಪೆ ಕಡಲ ತೀರಕ್ಕೆ ಸಾವಿರಾರು ಪ್ರವಾಸಿಗರು ನಿತ್ಯವೂ ಬರುತ್ತಿದ್ದು, ತೇಲುವ ಸೇತುವೆಯು ಆಕರ್ಷಣೆಯ ಕೇಂದ್ರವಾಗಲಿದೆ.
ಆದರೆ ಈಗ ಇದು ಮುರಿದ್ದು, ಇದನ್ನು ಸರಿ ಪಡಿಸಲು ಕನಿಷ್ಠ ಒಂದು ವಾರವಾದರೂ ಬೇಕೆಂದು ಅಂದಾಜಿಸಲಾಗಿದೆ. ಮಲ್ಪೆಗೆ ಬಂದ ಪ್ರವಾಸಿಗರೊಬ್ಬರು ಹಂಚಿಕೊಂಡ ವೀಡಿಯೋ ತುಣುಕು ಇಲ್ಲಿದೆ.