ಮಣಿಪಾಲ: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಮತ್ತು ಉದಯವಾಣಿ ಇದರ ಜಂಟಿ ಆಶ್ರಯದಲ್ಲಿ ಎಂ.ಐ.ಸಿ. ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿರುವ “ನಮ್ಮ ಸಂತೆ -2024” ಕಾರ್ಯಕ್ರಮದಲ್ಲಿ ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯು ತನ್ನ ಮಳಿಗೆಯನ್ನು ತೆರೆದು ವಿವಿಧ ಮೀನಿನ ಉತ್ಪನ್ನಗಳಾದ ಮೀನಿನ ಉಪ್ಪಿನಕಾಯಿ, ಒಣಮೀನು, ಒಣಮೀನಿನ ಚಟ್ನಿ ಮುಂತಾದವುಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ನಡೆಸಿತು.
ಸಾಗರೋತ್ಪನ್ನ ಆಹಾರ ಪ್ರಿಯರು ಮೀನಿನ ಮೌಲ್ಯವರ್ಧನೆಯ ಉತ್ಪನ್ನಗಳನ್ನು ಖರಿದಿಸಿದರಲ್ಲದೆ, ಮೀನಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಂಪನಿಯ ನಿರ್ದೇಶಕಿ ರೇಣುಕಾ ಹಾಗೂ ಮುಖ್ಯ ಕಾರ್ಯನಿರ್ವಾಹಕ ವಿಷ್ಣುಪ್ರಸಾದ ಕಾಮತ್ ಉಪಸ್ಥಿತರಿದ್ದರು