ಉಡುಪಿ: ಮೀನುಗಾರರ ಬಲೆಗೆ ಅಪರೂಪದ ಭಾರೀ ಗಾತ್ರದ ನೆಮ್ಮೀನ್ (ಹೆಲಿಕಾಪ್ಟರ್ ಫಿಶ್) ಬಿದ್ದಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.
ಮಲ್ಪೆ ಬಂದರಿನಿಂದ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟೇಕಲ್ ದೂರದಲ್ಲಿ ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ನ ಮೀನುಗಾರರಿಗೆ ಈ ಮೀನು ಸಿಕ್ಕಿದೆ.
ಬರೋಬ್ಬರಿ 84 ಕೆ.ಜಿ. ತೂಕದ ಈ ಮೀನು ಉದ್ದನೆಯ ಬಾಲ ಹಾಗೂ ರೆಕ್ಕೆಯ ಮೂಲಕ ಅಚ್ಚರಿ ಹುಟ್ಟಿಸಿತು. ಈ ನೆಮ್ಮೀನ್ ನನ್ನು ಕರ್ನಾಟಕದ ಜನ ಅಷ್ಟಾಗಿ ತಿನ್ನುವುದಿಲ್ಲ. ಕೇರಳಿದವರು ಈ ಮೀನನ್ನು ತಿನ್ನುತ್ತಾರೆ. ಹೀಗಾಗಿ ಮಲ್ಪೆಯಿಂದ ಕೇರಳದ ಮಾರುಕಟ್ಟೆಗೆ ಕೊಂಡೊಯ್ಯಲಾಗಿದೆ.