ಕೇರಳದ ಕೊಚ್ಚಿಯಲ್ಲಿ ಅಧಿಕಾರಿಗಳು ನಡೆಸಿದ ಮಾಧಕ ದ್ರವ್ಯ ದಾಳಿಯ ವೇಳೆಯಲ್ಲಿ ಮಲಯಾಳಂ ನ ಖ್ಯಾತ ನಟ ಶೈನ್ ಟಾಮ್ ಚಾಕೊ ದಾಳಿಯ ಸ್ಥಳದಿಂದ ಓಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ಮಾಧಕ ದ್ರವ್ಯ ಬಳಕೆ ಹೆಚ್ಷಾಗಿದೆ ಎನ್ನುವ ಆರೋಪ ಇತ್ತೀಚೆಗೆ ಕೇಳಿಬರತೊಡಗಿದ್ದು ಇದರ ನಡುವೆ ಈ ಹೊಸ ಪ್ರಕರಣ ಕೂಡ ಮಲಯಾಳಂ ಚಿತ್ರರಂಗದ ನಿದ್ದೆಗೆಡಿಸಿದೆ.
ಕೆಲವು ಸಮಯದ ಹಿಂದೆ ನಟ ಶೈನ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿಯೊಬ್ಬರು ದೂರು ನೀಡಿದ್ದರು. ಇದೀಗ ನಟ ಶೈನ್ ಮತ್ತೆ ಸುದ್ದಿಯಲ್ಲಿದ್ದಾರೆ.
ಕೊಚ್ಚಿಯ ಖಾಸಗಿ ಹೋಟೆಲ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮಾದಕವಸ್ತು ನಿಯಂತ್ರಣ ಘಟಕದ ಪೊಲೀಸರು ದಾಳಿ ನಡೆಸಿದ್ದಾರೆ. ಇದನ್ನು ತಿಳಿದ ನಟ ಶೈನ್ ಟಾಮ್ ಚಾಕೊ ಹೋಟೆಲ್‌ನಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ. ತಪ್ಪು ಮಾಡಿಲ್ಲವೆಂದರೆ ನಟ ಯಾಕೆ ಅಲ್ಲಿಂಗ ಕಾಲ್ಕಿತ್ತರು ಎನ್ನುವುದು ಇದೀಗ ಅನುಮಾನ ಮೂಡಿಸಿದೆ.
ಹೊಟೇಲ್ ನ ಎರಡನೆಯ ಮಹಡಿಯಿಂದ ಕಿಟಕಿಯ ಮೂಲಕ ಚಾಕೊ ತಪ್ಪಿಸಿಕೊಂಡು ಈಜುಕೊಳಕ್ಕೆ ಜಿಗಿದು ಹೊಟೇಲ್ ನಿಂದ ಪರಾರಿಯಾದ ದೃಶ್ಯ ಸೆರೆಯಾಗಿದೆ. ಈ ನಟನ ವಿರುದ್ದ ಈಗಾಗಲೇ ಚಿತ್ರರಂಗದಲ್ಲಿ ಹಲವಾರು ಆರೋಪಗಳಿವೆ. ಈ ಹಿಂದೆ ಮಾದಕ ದ್ರವ್ಯದ ಗ್ಯಾಂಗ್ ಗೂ ಇವರಿಗೂ ಸಂಬಂಧ ಇದೆ ಎಂದೂ ಹೇಳಲಾಗಿತ್ತು. ಇದೀಗ ಈ ಪರಾರಿ ಪ್ರಕರಣದಿಂದ ಮಾಧಕ ದ್ರವ್ಯಕ್ಕೂ ಈ ನಟನ ನಂಟಿರುವುದು ಖಂಡಿತ ಎಂದು ವಿಶ್ಲೇಷಿಸಲಾಗುತ್ತಿದೆ.












