udupixpress
Home Trending ಮಲಬಾರ್ ಚಾರಿಟೇಬಲ್ ಟ್ರಸ್ಟ್ ನಿಂದ ಬಡ ಯುವತಿಯ ಮದುವೆಗೆ ಎರಡು ಪವನ್ ಚಿನ್ನ ವಿತರಣೆ

ಮಲಬಾರ್ ಚಾರಿಟೇಬಲ್ ಟ್ರಸ್ಟ್ ನಿಂದ ಬಡ ಯುವತಿಯ ಮದುವೆಗೆ ಎರಡು ಪವನ್ ಚಿನ್ನ ವಿತರಣೆ

ಉಡುಪಿ: ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ಹೆಣ್ಣುಮಕ್ಕಳ ಮದುವೆಗೆ ಚಿನ್ನ ಕೊಡುವ ‘ಗೋಲ್ಡನ್ ಹಾರ್ಟ್’ ಯೋಜನೆಯಡಿ ನಿಶ್ಮಿತಾ ಎಂಬ ಫಲಾನುಭವಿಗೆ ಎರಡು ಪವನ್ ಚಿನ್ನವನ್ನು ನೀಡಲಾಯಿತು.

ಇದು ಮಲಬಾರ್ ಚಾರಿಟೇಬಲ್ ಟ್ರಸ್ಟ್ ನ
ಉಡುಪಿಯಲ್ಲಿ 15ನೇ ಯೋಜನೆಯಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಫಲಾನುಭವಿಯನ್ನು ಆಯ್ಕೆ ಮಾಡಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಮಲಬಾರ್ ಗೋಲ್ಡ್ ಉಡುಪಿ ಬ್ರಾಂಚ್ ನ ಮುಖ್ಯಸ್ಥ ಹಫೀಜ್ ರೆಹಮಾನ್, ಮಾರ್ಕೆಟಿಂಗ್ ಹೆಡ್ ರಾಘವೇಂದ್ರ ನಾಯಕ್ ಇದ್ದರು.

error: Content is protected !!