ಮಾಳ-ಕುದುರೆಮುಖ ರಸ್ತೆಯಲ್ಲಿ ಬಂಡೆಕಲ್ಲಿಗೆ ಬಡಿದ ಬಸ್ಸು: ಮೈಸೂರಿನ 9 ಮಂದಿ ಉದ್ಯೋಗಿಗಳು ಭೀಕರ ಸಾವು

ಕಾರ್ಕಳ :ಮಾಳ ಮೂಳೂರು ಘಾಟಿ ಯಲ್ಲಿ ಬಂಡೆಗಲ್ಲಿಗೆ ಬಡಿದು ಬಸ್ ನಲ್ಲಿದ್ದ  9 ಮಂದಿ ಸಾವನ್ನಪ್ಪಿದ ಘಟನೆ ಕಾರ್ಕಳ ಮಾಳ ಮುಳ್ಳೂರು ಘಾಟಿನಲ್ಲಿ ಶನಿವಾರ ಸಾಯಂಕಾಲ ಸಂಭವಿಸಿದೆ. ರಂಜಿತಾ, ರಾದಾದೇವಿ(22)  ಯೋಗೇಂದ್ರ(21)   ಬಸವರಾಜ್, (22) ವಿನುತಾ ಅನಘ್ನಾ,(20),ಪ್ರೀತಮ್, ಶರಿಲ್ ಸಾವನ್ನಪ್ಪಿದವರು.

ಬಸ್ಸು ಕುದುರೆಮುಖ ದಾರಿಯಾಗಿ ಮಾಳ ದಾರಿಯಾಗಿ ಧರ್ಮಸ್ಥಳಕ್ಕೆ ಹೊರಟಿರುವಾಗ ಈಘಟನೆ ಸಂಭವಿಸಿದೆ. ಮೈಸೂರು ಖಾಸಗಿ ಕಂಪೆನಿಗೆ ಸೇರಿದ ಬಸ್ಸಾಗಿದ್ದು  ಬಸ್ಸಲ್ಲಿದ್ದವರು ಪ್ರವಾಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಬಸ್ ಅತ್ಯಂತ ವೇಗದಿಂದ ಬಂದು ಇಲ್ಲಿನ ತಿರುವಿನಲ್ಲಿರುವ ಬಂಡೆಕಲ್ಲಿಗೆ ಬಡಿದಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ.ಬಸ್ ನಲ್ಲಿ ಒಟ್ಟು 35  ಮಂದಿ ಪ್ರಯಣಿಸುತ್ತಿದ್ದು ಮೈಸೂರಿನ  ವೈಟಲ್ ರೆಕಾಡ್ಸ್  ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಸ್ ಕಳಸದಲ್ಲಿ ಹಾಳಾಗಿದ್ದು ಆ ಬಳಿಕ ಕಳಸ ಪೇಟೆಯಲ್ಲಿ ರಿಪೇರಿಗೊಂಡಿತ್ತು ಎನ್ನುವ ಮಾಹಿತಿ ಸಿಕ್ಕಿದೆ.

ಬಸ್ ನಲ್ಲಿದ್ದ ಉಳಿದ ವ್ಯಕ್ತಿಗಳು ಗಾಯಗೊಂಡಿದ್ದು ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಈ ದಾರಿ ರಾಷ್ಟ್ರೀಯ ಉದ್ಯಾನವಾದ್ದರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ ತಡವಾಗಿದೆ. ಗಾಯಗೊಂಡ ಐವರನ್ನು ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ