ಮಹೀಂದ್ರಾ ಭಾರತದಲ್ಲಿ ಎರಡನೇ ತಲೆಮಾರಿನ ಥಾರ್ನ ರಿಯರ್-ವೀಲ್ ಡ್ರೈವ್ (ಆರ್.ಡಬ್ಲ್ಯೂ.ಡಿ) ರೂಪಾಂತರವನ್ನು ಬಿಡುಗಡೆ ಮಾಡಿದೆ, ಇದರ ಪರಿಚಯಾತ್ಮಕ ಬೆಲೆಗಳು ರೂ 9.99 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋ ರೂಂ). 4ಡಬ್ಲ್ಯೂಡಿ ರೂಪಾಂತರಗಳಂತೆ, ಥಾರ್ ರಿಯರ್-ವೀಲ್ ಡ್ರೈವ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ, ಆದರೂ ನೋಟದಲ್ಲಿ ಗಮನಾರ್ಹ ಬದಲಾವಣೆಗಳಿವೆ.
ಭಾರತದಲ್ಲಿ ಮಹೀಂದ್ರಾ ಥಾರ್ ಕಾರುಗಳ ಬಗ್ಗೆ ಖರೀದಿದಾರರಲ್ಲಿ ಹೆಚ್ಚು ಆಸಕ್ತಿ ಇದೆ. ಥಾರ್ 4×4 ರಂತೆ, ಹೊಸ ಥಾರ್ ಆರ್.ಡಬ್ಲ್ಯೂ.ಡಿಯು ಎ.ಎಕ್ಸ್(ಒ) ಮತ್ತು ಎಲ್.ಎಕ್ಸ್ ಟ್ರಿಮ್ ಹಂತಗಳಲ್ಲಿ ಲಭ್ಯವಿದೆ.
ಸಂಪೂರ್ಣ ಬೆಲೆ ಪಟ್ಟಿ ಹೀಗಿದೆ:
ಎ.ಎಕ್ಸ್(ಒ) ಆರ್.ಡಬ್ಲ್ಯೂ.ಡಿ – ಡೀಸೆಲ್ ಎಂಟಿ – ಹಾರ್ಡ್ ಟಾಪ್: ರೂ 9.99 ಲಕ್ಷ
ಎಲ್.ಎಕ್ಸ್ ಆರ್.ಡಬ್ಲ್ಯೂ.ಡಿ – ಡೀಸೆಲ್ ಎಂಟಿ – ಹಾರ್ಡ್ ಟಾಪ್: ರೂ 10.99 ಲಕ್ಷ
ಎಲ್.ಎಕ್ಸ್ ಆರ್.ಡಬ್ಲ್ಯೂ.ಡಿ-ಪೆಟ್ರೋಲ್ ಎಂಟಿ – ಹಾರ್ಡ್ ಟಾಪ್: ರೂ 13.49 ಲಕ್ಷ
ಪೆಟ್ರೋಲ್ ಎಂಜಿನ್: 4 ವೀಲ್ ಡ್ರೈವ್ ಮಾದರಿಯಂತೆಯೇ 150 bhp 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ. 4 ವೀಲ್ ಡ್ರೈವ್ ನಂತೆ ಇಲ್ಲಿಯೂ ಇದು 6-ಸ್ಪೀಡ್ ಸ್ವಯಂಚಾಲಿತ ಗೇರ್ಬಾಕ್ಸ್ನೊಂದಿಗೆ ಮಾತ್ರ ಲಭ್ಯವಿದೆ. ಈ ಮಧ್ಯೆ ಡೀಸೆಲ್ ಎಂಜಿನ್ ಥಾರ್ಗೆ ಹೊಸದಾಗಿದೆ. ಹೊಸ ಡೀಸೆಲ್ ಎಂಜಿನ್ ಸ್ಟಾಪ್-ಸ್ಟಾರ್ಟ್ ತಂತ್ರಜ್ಞಾನವಿರಲಿದೆ. ಡೀಸೆಲ್ ಘಟಕವು 6-ಸ್ಪೀಡ್ ಹಸ್ತಚಾಲಿತ ಗೇರ್ಬಾಕ್ಸ್ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲ್ಪಟ್ಟಿದೆ ಮತ್ತು ಸ್ವಯಂಚಾಲಿತ ಆಯ್ಕೆಯನ್ನು ಹೊಂದಿರುವುದಿಲ್ಲ. ಆರ್.ಡಬ್ಲ್ಯೂ.ಡಿ ರೂಪಾಂತರಗಳು 4×4 ಮಾದರಿಯ ಆಫ್-ರೋಡ್-ಕೇಂದ್ರಿತ ಯಂತ್ರಾಂಶವನ್ನು ಸಹ ಕೈಬಿಟ್ಟಿದೆ.
ಸಲಕರಣೆಗಳ ವಿಷಯದಲ್ಲಿ, ಥಾರ್ ಆರ್ಡಬ್ಲ್ಯೂಡಿ ರಿಮೋಟ್ ಲಾಕಿಂಗ್, ರಿಯರ್ ಡಿಫಾಗರ್, ಯುಎಸ್ಬಿ ಚಾರ್ಜಿಂಗ್ ಸಾಕೆಟ್ಗಳು, ಡ್ರೈವರ್ ಸೀಟ್ ಎತ್ತರ ಹೊಂದಾಣಿಕೆ, ಕ್ರೂಸ್ ಕಂಟ್ರೋಲ್, ನ್ಯಾವಿಗೇಷನ್ನೊಂದಿಗೆ 7.0-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಟೈರ್ ದಿಕ್ಸೂಚಕ, ಟೈರ್ ಒತ್ತಡದ ಮಾನಿಟರಿಂಗ್, ಡ್ಯುಯಲ್ ಏರ್ಬ್ಯಾಗ್ , ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸಂವೇದಕಗಳು ಮತ್ತು ಇಎಸ್ಪಿ ಮುಂತಾದ ಕಿಟ್ಗಳನ್ನು ಹೊಂದಿದೆ. ಸ್ವಲ್ಪ ಕಡಿಮೆ ಬೆಲೆಗೆ ಮಹೀಂದ್ರಾ ಥಾರ್ ಕೊಂಡುಕೊಳ್ಳಬೇಕೆನ್ನುವವರಿಗೆ ಸೂಕ್ತವಾಗಿದೆ.