ಮಹೀಂದ್ರಾ ಥಾರ್‌ ಎಸ್‌ಯುವಿಯ ಅರ್ಥ್‌ ಎಡಿಷನ್ ಬಿಡುಗಡೆ: 15.40 ಲಕ್ಷ ರೂ. ನಿಂದ ಆರಂಭ

ಭಾರತದ ದೇಶೀಯ ವಾಹನ ತಯಾರಿಕಾ ಸಂಸ್ಥೆಗಳ ದಿಗ್ಗಜ ಮಹೀಂದ್ರಾ ಆಂಡ್ ಮಹೀಂದ್ರಾ ತನ್ನ ಜನಪ್ರಿಯ ಥಾರ್‌ ಎಸ್‌ಯುವಿಯ ಅರ್ಥ್‌(Thar Earth) ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಇದು ಥಾರ್‌ ಡೆಸರ್ಟ್‌ನಿಂದ ಸ್ಫೂರ್ತಿ ಪಡೆದಿದೆ ಹಾಗೂ ಈ ಎಸ್‌ಯುವಿ ಡೆಸರ್ಟ್ ಫ್ಯೂರಿ ಸ್ಯಾಟಿನ್ ಮ್ಯಾಟ್ ಪೇಂಟ್ ಸ್ಕೀಮ್‌ ಅನ್ನು ಹೊಂದಿದೆ ಎಂದು ಮಹೀಂದ್ರಾ (Mahindra & Mahindra) ಹೇಳಿಕೊಂಡಿದೆ. ಥಾರ್‌ ಅರ್ಥ್‌ ಎಡಿಷನ್ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದ್ದು, ಇದರ ಎಕ್ಸ್‌ ಶೋರೂಮ್ ಬೆಲೆ 15.40 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ.

ಬೆಲೆ:

ಥಾರ್‌ ಅರ್ಥ್‌ ಎಡಿಷನ್‌ ಪೆಟ್ರೋಲ್ – ಎಂಟಿ 15.40 ಲಕ್ಷ ರೂಪಾಯಿ
ಥಾರ್‌ ಅರ್ಥ್‌ ಎಡಿಷನ್‌ ಪೆಟ್ರೋಲ್ -ಎಟಿ 16.99 ಲಕ್ಷ ರೂಪಾಯಿ
ಥಾರ್‌ ಅರ್ಥ್‌ ಎಡಿಷನ್‌ ಡೀಸೆಲ್ – ಎಂಟಿ 16.15 ಲಕ್ಷ ರೂಪಾಯಿ
ಥಾರ್‌ ಅರ್ಥ್‌ ಎಡಿಷನ್‌ ಡೀಸೆಲ್ – ಎಟಿ 17.60 ಲಕ್ಷ ರೂಪಾಯಿ

ವೈಶಿಷ್ಟ್ಯಗಳು:

ಥಾರ್ ಅರ್ಥ್ ಆವೃತ್ತಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಒಂದು 2.2-ಲೀಟರ್, ಫೋರ್ -ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್. ಇದು 130 ಪಿಎಸ್ ಶಕ್ತಿ ಹಾಗೂ 300 ಎನ್‌ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಇನ್ನೊಂದು 2.0-ಲೀಟರ್, ಟರ್ಬೊ-ಪೆಟ್ರೋಲ್ ಎಂಜಿನ್. ಈ ಎಂಜಿನ್ 150 ಪಿಎಸ್ ಶಕ್ತಿ ಹಾಗೂ 320 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳು ಆರು ಸ್ಪೀಡ್ ಮ್ಯಾನ್ಯುವಲ್ ಅಥವಾ ಆರು-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಜೋಡಿಯಾಗಿ ಬರುತ್ತವೆ.

ವಿನ್ಯಾಸ:

ಥಾರ್‌ ಅರ್ಥ್‌ ಆವೃತ್ತಿ ಸಾಮಾನ್ಯ ಥಾರ್‌ನಂತೆಯೇ ಕಾಣುತ್ತದೆ. ಆದರೆ, ಹಿಂಭಾಗದ ಫೆಂಡರ್ ಹಾಗೂ ಬಾಗಿಲುಗಳಲ್ಲಿ ಡ್ಯೂನ್-ಪ್ರೇರಿತ ಡೆಕಾಲ್‌ಗಳೊಂದಿಗೆ ವಿಶೇಷವಾದ ಡೆಸರ್ಟ್ ಫ್ಯೂರಿ ಸ್ಯಾಟಿನ್ ಮ್ಯಾಟ್ ಪೇಂಟ್, ಬಿ-ಪಿಲ್ಲರ್‌ಗಳ ಮೇಲೆ ಅರ್ಥ್ ಆವೃತ್ತಿ ಬ್ಯಾಡ್ಜ್, ಮ್ಯಾಟ್ ಕಪ್ಪು ಬ್ಯಾಡ್ಜ್‌ಗಳು ಮತ್ತು 17-ಇಂಚಿನ ಸಿಲ್ವರ್ ಅಲಾಯ್ ವ್ಹೀಲ್‌ಗಳನ್ನು ಇದು ಹೊಂದಿದೆ. ಥಾರ್ ಅರ್ಥ್ ಆವೃತ್ತಿಯು ಬೀಜ್ ಲೆಥೆರೆಟ್ ಸೀಟ್‌ಗಳು ಹೆಡ್‌ರೆಸ್ಟ್‌ಗಳಲ್ಲಿ ಡ್ಯೂನ್ ವಿನ್ಯಾಸಗಳನ್ನು ಒಳಗೊಂಡಿದೆ. ಎಸಿ ವೆಂಟ್‌ಗಳು, ಸ್ಟೀರಿಂಗ್ ವೀಲ್, ಸೆಂಟರ್ ಕನ್ಸೋಲ್ ಆಕ್ಸೆಂಟ್ ಮತ್ತು ಡೋರ್‌ಗಳಲ್ಲಿ ಥಾರ್ ಬ್ರ್ಯಾಂಡಿಂಗ್‌ ಅನ್ನೂ ನೋಡಬಹುದು.

ಪ್ರತಿ ಯುನಿಟ್ ವಿಶಿಷ್ಟ ಸಂಖ್ಯೆಯ ಅಲಂಕಾರಿಕ ವಿಐಎನ್ ಪ್ಲೇಟ್ ಅನ್ನು ಪಡೆಯುತ್ತದೆ ಎಂದು ಮಹೀಂದ್ರಾ ಹೇಳಿದ್ದು, ಗ್ರಾಹಕರು ಕಸ್ಟಮೈಸ್ ಮಾಡಿದ ಮುಂಭಾಗ ಮತ್ತು ಹಿಂಭಾಗದ ಆರ್ಮ್‌ರೆಸ್ಟ್‌ಗಳು, ಫ್ಲೋರ್‌ ಮ್ಯಾಟ್‌ಗಳು ಮತ್ತು ಕಂಫರ್ಟ್‌ ಕಿಟ್‌ನಂತಹ ಪರಿಕರಗಳನ್ನು ಸಹ ಆರಿಸಿಕೊಳ್ಳಬಹುದು.