ಮಂಗಳೂರು: ಮಹೇಶ್ ಮೋಟರ್ಸ್ ಮಾಲಕ ಪ್ರಕಾಶ್ ಶೇಖ ನೇಣಿಗೆ ಶರಣು

ಮಂಗಳೂರು: ಇಲ್ಲಿನ ಕದ್ರಿ ಕಂಬಳದಲ್ಲಿ ಅ. 1 ರಂದು ಮಹೇಶ್ ಮೋಟಾರ್ಸ್ ಮಾಲೀಕನ ಮಗ ಪ್ರಕಾಶ್ ಶೇಖ (42) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೂಲಗಳ ಪ್ರಕಾರ, ಭಾನುವಾರದಂದು ಪ್ರಕಾಶ್ ಅವರು ಕದ್ರಿ ಕಂಬಳದಲ್ಲಿರುವ ತಮ್ಮ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.