ಕಾರ್ಕಳ: ಮುಂಡ್ಕೂರು ಗ್ರಾಮದ ಸಂಕಲಕರಿಯ ಶಾಂಭವಿ ನದಿಗೆ ಮಹೇಂದ್ರ ಬೊಲೇರೊ ವಾಹನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಜ.12ರಂದು ಬೆಳಗ್ಗೆ ನಡೆದಿದೆ.
ವಾಹನದಲ್ಲಿ ಒಂದೇ ಮನೆಯ 4 ಜನ ಪ್ರಯಾಣ ಮಾಡುತ್ತಿದ್ದು. ಚಾಲಕನ ನಿಯಂತ್ರಣ ತಪ್ಪಿ ವಾಹನ ನದಿಗೆ ಬಿದ್ದಿದೆ. ನದಿಗೆ ಬಿದ್ದ ರಭಸದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ 3 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರನ್ನು ಕಾರ್ಕಳ ಬೋಳ ನಿವಾಸಿ ಡೈನಾ ಮಸ್ಕರೇನಸ್(44) ಎಂದು ಗುರುತಿಸಲಾಗಿದೆ. ಜೀಪು ಚಲಾಯಿಸುತ್ತಿದ್ದ ಮೃತರ ಪತಿ ಸ್ಟಾನಿ ಮಸ್ಕರೇನಸ್, ಮಕ್ಕಳಾದ ಶಲ್ಡನ್ ಹಾಗೂ ಶರ್ಮನ್ ಎಂಬವರು ಗಾಯಗೊಂಡಿದ್ದಾರೆ.