ಮಾಹೆ: ಮಾಹೆಯ ಗಾಂಧಿಯನ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಹೊಸ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವು ಆಗಸ್ಟ್ 22, 2022 ರಂದು ಬೆಳಿಗ್ಗೆ 10.30 ಕ್ಕೆ ಓಲ್ಡ್ ಟ್ಯಾಪ್ಮಿ ಕಟ್ಟಡದಲ್ಲಿರುವ ಜಿಸಿಪಿಎಎಸ್ ನ ಸರ್ವೋದಯ ಹಾಲ್ ನಲ್ಲಿ ನಡೆಯಲಿದೆ.

ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಜನರಲ್ ಸರ್ವಿಸಸ್ ನ ನಿರ್ದೇಶಕ ಕರ್ನಲ್ ಪ್ರಕಾಶ್ ಚಂದ್ರ, ಮಣಿಪಾಲ ಎಂಕೊಡ್ಸ್ ನ ಪ್ರಾಧ್ಯಾಪಕರಾದ ಡಾ.ಶಶಿರಶ್ಮಿ ಆಚಾರ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದೇಶ ಮತ್ತು ವಿದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಈ ಬಾರಿ ಎಂಎ-ಇಕೊಸೊಫಿಕಲ್ ಎಸ್ಥೆಟಿಕ್ಸ್, ಎಂಎ-ಆರ್ಟ್ ಅಂಡ್ ಪೀಸ್ ಸ್ಟಡೀಸ್ ಮತ್ತು ಬಿಎ- ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್ ಅಧ್ಯಯನದಲ್ಲಿ ತೊಡಗಿಕೊಳ್ಳಲಿದ್ದಾರೆ.

ಭವಿಷ್ಯದ ಕೀಲಿ ಕೈಯಾಗಿರುವ ಈ ಅಧ್ಯಯನ ಕ್ಷೇತ್ರಗಳನ್ನು ಪರಿಚಯಿಸುವುದರ ಮೂಲಕ ಈ ಕಲಿಕಾ ವರ್ಷಕ್ಕೆ ಚಲನೆಯನ್ನು ನೀಡಲಾಗುವುದು. ಪರಿಸರ ವಿಜ್ಞಾನ, ಸೌಂದರ್ಯಶಾಸ್ತ್ರ ಮತ್ತು ಶಾಂತಿ ಅಧ್ಯಯನಗಳು ಭವಿಷ್ಯದ ಪೀಳಿಗೆಗೆ ದಾರಿದೀಪವಾಗಲಿದೆ ಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.