ಮಾಹೆ: ವಿದ್ಯಾರ್ಥಿಗಳಿಗಾಗಿ ಜೆಂಡರ್ ಚಾಂಪಿಯನ್ ಕಾರ್ಯಾಗಾರ

ಮಣಿಪಾಲ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗವು ವಿವಿಧ ವಿದ್ಯಾರ್ಥಿ ಸಮುದಾಯಕ್ಕೆ ಜೆಂಡರ್ ಚಾಂಪಿಯನ್ ಕಾರ್ಯಾಗಾರವನ್ನು ಆಗಸ್ಟ್ 27 ರಂದು ಬೆಳಿಗ್ಗೆ 9.30 ರಿಂದ ಸಂಜೆ 4.30 ರವರೆಗೆ ಆಯೋಜಿಸಲಾಗಿತ್ತು. ಮಾಹೆಯ ವಿವಿಧ ಸಂಸ್ಥೆಗಳಿಂದ 55 ಅಧ್ಯಾಪಕ ಸಂಯೋಜಕರು ಮತ್ತು ಆಯ್ದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಾಂತವೀರ ಶಿವಪ್ಪ ಮಾತನಾಡಿ, ಎಲ್ಲಾ ಲಿಂಗಗಳಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶಗಳನ್ನು ಒದಗಿಸುವ ಮೂಲಕ ತಾರತಮ್ಯವನ್ನು ತೊಡೆದುಹಾಕಲು ಪ್ರಯತ್ನಗಳನ್ನು ಮಾಡುವ ತುರ್ತು ಅವಶ್ಯಕತೆಯಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ, ಮಾಹೆಯ ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್ ಉಪಸ್ಥಿತರಿದ್ದರು.

ಮಾಹೆ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ.ಗೀತಾ ಮಯ್ಯ ಸ್ವಾಗತಿಸಿದರು. ವಿದ್ಯಾರ್ಥಿ ಸಮಾಲೋಚಕರಾದ ಜೋಸ್ನಾ ಮತ್ತು ಸುಜಾತ ನಿರೂಪಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪೂನಂ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರುಣಾ ದೇವಾಡಿಗ ಕಾರ್ಯಾಗಾರದ ಅಧಿವೇಶನವನ್ನು ಸಂಯೋಜಿಸಿದರು. ವಿದ್ಯಾರ್ಥಿ ವ್ಯವಹಾರಗಳ ಉಪ ನಿರ್ದೇಶಕ ಡಾ ಅಶ್ವಿನಿ ಕುಮಾರ್ ವಂದಿಸಿದರು.