ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯು ಸ್ಥಾಪಕರಾದ ಡಾ. ಟಿ. ಎಂ. ಎ. ಪೈ ಅವರ 124 ನೆಯ ಜನ್ಮದಿನವನ್ನು ಎಪ್ರಿಲ್ 30, ಶನಿವಾರದಂದು ಆಚರಿಸಿತು. ಸ್ಥಾಪಕರ ದಿನಾಚರಣೆಯನ್ನು ಮಣಿಪಾಲ ಸಮೂಹ ಸಂಸ್ಥೆಗಳಾದ ಡಾ. ಟಿ. ಎಂ. ಎ. ಪೈ ಫೌಂಡೇಶನ್, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ., ಮತ್ತು ಮಣಿಪಾಲ್ ಎಜುಕೇಶನ್ ಹಾಗೂ ಮಣಿಪಾಲ್ ಗ್ರೂಪ್ ಗಳಲ್ಲಿಯೂ ಆಚರಿಸಲಾಯಿತು.
ಡಾ. ಟಿಎಂಪೈಯವರ ಚಿತ್ರಕೃತಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ ಹೆಗ್ಡೆ, ಸಮಾಜಕ್ಕೆ ಡಾ. ಟಿ. ಎಂ. ಪೈ ಅವರ ಕೊಡುಗೆಯನ್ನು ಮತ್ತು ಭಾರತದ ಶಿಕ್ಷಣ ವ್ಯವಸ್ಥೆಗೆ ಅವರು ನೀಡಿದ ಹೊಸ ಆಯಾಮವನ್ನು ಸ್ಮರಿಸಿಕೊಂಡರು.
ಅದೇ ದಿನ ಸಂಜೆ, ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಗದು ಬಹುಮಾನಗಳನ್ನು ವಿತರಿಸಲಾಯಿತು.
ಮಣಿಪಾಲ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ರಿಜಿಸ್ಟ್ರಾರ್, ಮಾಹೆಯ ಅಧ್ಯಕ್ಷ, ಮಣಿಪಾಲ್ ಎಜುಕೇಶನ್ ಹಾಗೂ ಮಣಿಪಾಲ್ ಗ್ರೂಪ್ ನ ಚೈರ್ ಮ್ಯಾನ್ ಡಾ. ರಂಜನ್ ಆರ್. ಪೈ, ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಅಧ್ಯಕ್ಷ ಮತ್ತು ಮಾಹೆಯ ಸಹಕುಲಾಧಿಪತಿ ಎಚ್. ಎಸ್. ಬಲ್ಲಾಳ್, ಮಾಹೆಯ ಕುಲಪತಿ ಲೆ, ಜ, ಡಾ. ಎಂ. ಡಿ. ವೆಂಕಟೇಶ್, ಮಾಹೆಯ ಕುಲಸಚಿವ ಡಾ. ನಾರಾಯಣ ಸಭಾಹಿತ್, ಡಾ. ಟಿ. ಎಂ. ಎ. ಪೈ ಫೌಂಡೇಶನ್‌ನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಟಿ. ಅಶೋಕ ಪೈ ಮತ್ತಿತರರು ಉಪಸ್ಥಿತರಿದ್ದರು.
ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಅಧ್ಯಕ್ಷ ಮತ್ತು ಸಹಕುಲಪತಿ ಡಾ. ಎಚ್. ಎಸ್. ಬಲ್ಲಾಳ್ ಅತಿಥಿಗಳನ್ನು ಸ್ವಾಗತಿಸಿದರು.












