ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 8ರ ಶುಕ್ರವಾರ ಮಹಾಶಿವರಾತ್ರಿ ಮಹೋತ್ಸವವನ್ನು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಗುವುದು.

ಬೆಳಗ್ಗೆ 6.30 ರಿಂದ ರಾತ್ರಿ 10 ರ ವರೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಮತ್ತು ಬಿಲ್ವಾರ್ಚನೆ ಸಹಿತ ಸರ್ವಸೇವೆಗಳು ನಡೆಯಲಿವೆ.

ಬೆಳಿಗ್ಗೆ 5 ರಿಂದ 7ರವರೆಗೆ ಯೋಗ – ಶಿವ ನಮಸ್ಕಾರ, 7 ರಿಂದ 8 ರವರೆಗೆ ಏಕಾದಶ ರುದ್ರಾಭಿಷೇಕ, ಸಂಜೆ 5 ರಿಂದ 9 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, 6 ರಿಂದ 8.30 ರ ವರೆಗೆ ಶತ ರುದ್ರಾಭಿಷೇಕ, ರಾತ್ರಿ 9 ಕ್ಕೆ ಆರ್. ಎಸ್. ಎಸ್. ಘೋಷವಾದನ, ರಾತ್ರಿ 10 ರಿಂದ ‘ಸಹಸ್ರ ಬಿಲ್ವಾರ್ಚನೆ ಮಹಾರಂಗಪೂಜೆ ಸೇವೆ’ ನಡೆಯಲಿದೆ.

ಯಕ್ಷಗಾನ ವೇದಿಕೆಯಲ್ಲಿ ರಾತ್ರಿ 9 ರಿಂದ ಸಾಲಿಗ್ರಾಮ ಮೇಳದ ಆಯ್ದ ಪ್ರಸಿದ್ಧ ಕಲಾವಿದರಿಂದ ‘ಶ್ರೀ ಕೃಷ್ಣ ಪಾರಿಜಾತ’ ಪೌರಾಣಿಕ ಪ್ರಸಂಗ ನಡೆಯಲಿದ್ದು, ಬಳಿಕ ಬೆಳಗ್ಗಿನವರೆಗೂ ಹಿರಿಯಡಕ ಯಕ್ಷಗಾನ ಮೇಳದವರಿಂದ ‘ಸತ್ಯದ ಸಿರಿಗೆಂಡೆ’ ಎಂಬ ಹಾಸ್ಯಮಯ ಸಾಮಾಜಿಕ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಮಹೇಶ್ ಠಾಕೂರ್ ತಿಳಿಸಿದ್ದಾರೆ.