ಹಾರಾಡಿ: ಮಾ.8 ರಿಂದ 12 ರವರೆಗೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು

ಹಾರಾಡಿ: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವವು ಮಾ.8 ರಿಂದ 12 ರವರೆಗೆ ನಡೆಯಲಿದ್ದು, ವಿವಿಧ ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಮಾ. 8 ರಂದು ಬೆಳಿಗ್ಗೆ ಧ್ವಜಾರೋಹಣ ಮತ್ತು ರಾತ್ರಿ ಶಿವರಾತ್ರಿಯ ಮಹಾರಂಗಪೂಜೆ ನಡೆಯಲಿದೆ.

ಮಾ.9 ರಂದು ಬೆಳಿಗ್ಗೆ ದೇವತಾ ಕಾರ್ಯಕ್ರಮ ರಾತ್ರಿ ರಂಗಪೂಜೆ ನಡೆಯಲಿದೆ.

ಮಾ.10 ರಂದು ಮಧ್ಯಾಹ್ನ 12 ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಮನ್ಮಹಾರಥೋತ್ಸವ ಜರುಗಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ರಥೋತ್ಸವ ನಿಮಿತ್ತ ಭಜನಾ ಕಾರ್ಯಕ್ರಮಗಳು, ರಸಮಂಜರಿ, ನಗೆಹಬ್ಬ, ನೃತ್ಯ ಹಾಗೂ ನಗೆ ನಾಟಕಗಳು ಪ್ರದರ್ಶನಗೊಳ್ಳಲಿದೆ.