ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ನ  ವೆಬ್‌ಸೈಟ್ ಉದ್ಘಾಟನೆ

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ನೂತನ ವೆಬ್‌ಸೈಟ್‌ನ (www.mahalakshmicoopbank.com) ಉದ್ಘಾಟನೆ ಬ್ಯಾಂಕ್ ನ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು.
ಬ್ಯಾಂಕಿನ ಗ್ರಾಹಕರೂ, ಗೀತಾನಂದ ಫೌಂಡೇಶನ್ ಕೋಟ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಅವರು ವೆಬ್ಸೈಟ್ ಉದ್ಘಾಟಿಸಿದರು.
ಆಧುನಿಕ ತಂತ್ರಜ್ಞಾನದೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಮಂದಾಗಿರುವ ಬ್ಯಾಂಕಿನ ಕಾರ್ಯವೈಖರಿಯನ್ನು ಮೆಚ್ಚಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ಉಪಾಧ್ಯಕ್ಷ ಪಿ. ಮಾಧವ ಸುವರ್ಣ, ಬ್ಯಾಂಕ್ ನ ಗ್ರಾಹಕ ಆನಂದ ಪಿ. ಸುವರ್ಣ, ಎಚ್. ಟಿ. ಕಿದಿಯೂರು, ಸತೀಶ್ ಕುಂದರ್, ಗುಂಡು ಬಿ. ಅಮೀನ್, ಸುಧಾಕರ ಕುಂದರ್, ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.