ಹಿರಿಯಡಕ: ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲಾದಲ್ಲಿ ಅಷ್ಟೋತ್ತರಶತ ನಾರಿಕೇಳ ಶ್ರೀ ಮಹಾಗಣಪತಿ ಯಾಗ

ಹಿರಿಯಡಕ: ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲಾದಲ್ಲಿ ಅಷ್ಟೋತ್ತರಶತ ನಾರಿಕೇಳ ಶ್ರೀ ಮಹಾಗಣಪತಿ ಯಾಗ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಫೆ.10 ಮತ್ತು11ರಂದು ನಡೆಯಲಿದೆ.

ಫೆ. 10 ರಂದು ಬೆಳಗ್ಗೆ 9 ಗಂಟೆಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗುರು ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹವಾಚನ ದೇವನಾಂದಿ, ಕೌತುಕ ಬಂಧನ, ಆಚಾರ್ಯವರಣ, ಸಪ್ತಶತಿ ಪಾರಾಯಣ ದುರ್ಗಾ ಹೋಮ, ಪವಮಾನ ಹೋಮ, ಪಂಚಾಮೃತ ಅಭಿಷೇಕ ನಡೆಯಲಿದೆ. ಸಂಜೆ 4 ಗಂಟೆಗೆ ಮಂಟಪ ಸಮಸ್ಕಾರ, ಪ್ರಧಾನ ಕಲಶ ಪ್ರತಿಷ್ಠೆ, ಮಂಡಲಾಧನೆ, ಕುಂಡ ಸಂಸ್ಕಾರ, ಅರಣಿ ಮಥನ, ಅಗ್ನಿ ಜನನ, ಉಪಚಾರ ಪೂಜೆ, ಅಷ್ಟಾವಧಾನ ನಡೆಯಲಿದೆ.

ಫೆ. 11ರಂದು ಬೆಳಗ್ಗೆ 7 ಯಜ್ಞ ಸಂಕಲ್ಪ, 8 ಗಂಟೆಗೆ ಯಜ್ಞಾರಂಭ, ಸಹಸ್ರನಾಮ ದೂರ್ವಾಚನೆ, ಕುಂಕುಮಾರ್ಚನೆ, 11 ಗಂಟೆಗೆ ಮಹಾಪೂರ್ಣಾಹುತಿ, 12 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಂತರ ಮಹಾ ಅನ್ನಸಂತರ್ಪಣೆ ಮತ್ತು ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ

ಫೆ. 11ರಂದು ಸಂಜೆ 6 ರಿಂದ ಸಾಂಸ್ಕೃತಿಕ ವೈಭವ ನಡೆಯಲಿದ್ದು, ರಾತ್ರಿ 8 ಗಂಟೆಗೆ ಸನ್ನಿಧಿ ಕಲಾವಿದರು ಉಡುಪಿ ಅಭಿನಯಿಸುವ ರವಿಕುಮಾರ್‌ ಕಡೆಕಾರ್‌ ಸಾಹಿತ್ಯ ಸಂಭಾಷಣೆ ಮತ್ತು ನಿರ್ದೇಶನದ ‘ಅಪ್ಪೆ ಮಂತ್ರದೇವತೆ’ ತುಳು ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.