ಕನ್ನಡದ ಸು ಫ್ರಂ ಸೋ ಥಿಯೇಟರ್ ಗಳಲ್ಲಿ ಅದ್ಬುತ ಯಶಸ್ಸು ಗಳಿಸುತ್ತಿರುವ ಬೆನ್ನಲ್ಲೇ ಇನ್ನೊಂದು ಸಿನಿಮಾ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸುದ್ದಿ ಬಂದಿದೆ. ಹೌದು ಮಹಾವತಾರ ನರಸಿಂಹ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕೇವಲ 10 ದಿನಗಳಲ್ಲಿ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ಸಿದ್ಧವಾಗಿದೆ. ಪೌರಾಣಿಕ ಕಥೆ ಮತ್ತು ಅತ್ಯುತ್ತಮ ಅನಿಮೇಷನ್ ಪ್ರೇಕ್ಷಕರನ್ನು ಆಕರ್ಷಿಸಿದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರನ್ನು ಅರ್ಪಿಸಿದೆ. 2 ಗಂಟೆ 10 ನಿಮಿಷಗಳ ಈ ಚಿತ್ರಕ್ಕೆ ಅಶ್ವಿನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.
ಈ ಚಿತ್ರ ಜುಲೈ 25 ರಂದು ಬಿಡುಗಡೆಯಾಯಿತು. ಕೇವಲ 10 ದಿನಗಳಲ್ಲಿ ಈ ಚಿತ್ರ 91 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಗಡಿ ದಾಟಿದೆ. ಈ ಚಿತ್ರದ ಬಜೆಟ್ ಕೇವಲ 5 ಕೋಟಿ ರೂ. ಎಂದು ಹೇಳಲಾಗಿದೆ.












