ನವದೆಹಲಿ:ನೀವು ಮ್ಯಾಗಿ ಪ್ರಿಯರಾಗಿರಬಹುದು. ಆಗಾಗ ಮ್ಯಾಗಿ ಮಾಡಿ ಅದರ ರುಚಿಗೆ ಮಾರುಹೋಗಿರಬಹುದು.ಇಲ್ಲಿ ಕೇಳಿ ಮ್ಯಾಗಿಯಲ್ಲಿ ಆರೋಗ್ಯಕರ ಅಂಶಗಳಿಲ್ಲ ಎನ್ನುವುದನ್ನು ಇದೀಗ ನೆಸ್ಲೆ ಕಂಪೆನಿಯೇ ಒಪ್ಪಿಕೊಂಡು ಸುದ್ದಿಯಲ್ಲಿದೆ. ಹೌದು ಮ್ಯಾಗಿಯಲ್ಲಿ ಬಳಸಿರುವ ಶೇ.60ರಷ್ಟು ವಸ್ತುಗಳು ಸುರಕ್ಷಿತವಲ್ಲ, ಆರೋಗ್ಯಕರವಲ್ಲ ಎಂದು ಒಪ್ಪಿಕೊಂಡಿದೆ. ನೆಸ್ಲೆ ಕಂಪನಿ ಮ್ಯಾಗಿ ಮಾತ್ರವಲ್ಲದೆ ಕಿಟ್ಕ್ಯಾಟ್ ಚಾಕ್ಲೇಟ್, ನೆಸ್ಕೆಫೆ ಕಾಫಿಪುಡಿ ಕೂಡ ಸೇಫ್ ಅಲ್ಲ ಎಂದು ಒಪ್ಪಿಕೊಂಡಿದೆ. ಆರೋಗ್ಯ ಸುರಕ್ಷಿತ ಮಟ್ಟವನ್ನು ನಮ್ಮ ಉತ್ಪನ್ನಗಳು ತಲುಪುತ್ತಿಲ್ಲ ಆರೋಗ್ಯ ಇಲಾಖೆಯ ನಿಯಮದಡಿಯಲ್ಲಿ ನಮ್ಮ ಶೇ.70ರಷ್ಟು ಉತ್ಪನ್ನಗಳು ಸೇಫ್ ಅಲ್ಲ ಎಂದು ತಿಳಿಸಿದೆ.
ನೆಸ್ಲೆ ಕಂಪನಿಯ ತಂಪು ಪಾನೀಯಗಳಲ್ಲೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಂಶಗಳಿವೆ. ನೆಸ್ಲೆಯ ಶೇ.37ರಷ್ಟು ಉತ್ಪನ್ನಗಳು ಮಾತ್ರ ಆರೋಗ್ಯಕರ ಎಂಬುದು ಸಾಬೀತಾಗಿದೆ. ಉಳಿದ ಉತ್ಪನ್ನಗಳು ಆರೋಗ್ಯಕರವಲ್ಲ ಎಂದು ಸಾಬೀತಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಇದೀಗ ನೆಸ್ಲೇ ಕಂಪೆನಿ ಸತ್ಯ ಹೇಳಿದೆ. ಆದರೆ ಇಳಿದ ಬ್ರ್ಯಾಂಡ್ ಗಳ ಮ್ಯಾಗಿಯ ಮೇಲೆಯೂ ಇದೀಗ ಅನುಮಾನ ವ್ಯಕ್ತವಾಗಿದೆ.