ಬಂಟ್ವಾಳ: ಡಿ. 10 ರಂದು ಮಡಿವಾಳರ ಸಂಘದ ವಾರ್ಷಿಕ ಕ್ರೀಡೋತ್ಸವ

ಬಂಟ್ವಾಳ: ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ಇದರ 32ನೇ ವಾರ್ಷಿಕ ಮಹೋತ್ಸವ ಪ್ರಯುಕ್ತ ಮಡಿವಾಳ ಯುವ ಬಳಗದ ಪಾಯೋಜಕತ್ವದಲ್ಲಿ ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ ಭವನದ ಮುಂಭಾಗದ ಮೈದಾನದಲ್ಲಿ ಡಿ. 10 ರಂದು ಕ್ರೀಡೋತ್ಸವ ಏರ್ಪಡಿಸಲಾಗಿದೆ.

ಬೆಳಗ್ಗೆ 9 ಗಂಟೆಗೆ ಕ್ರೀಡೋತ್ಸವ ಸಭಾ ಕಾರ್ಯಕ್ರಮವನ್ನು ಮಂಗಳೂರು ವಿಶೇಷ ಆರ್ಥಿಕ ವಲಯ ಪ್ರಬಂಧಕ ಯೋಗೀಶ ಕಲಸಡ್ಕ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಎನ್.ಕೆ. ಶಿವ ಅಧ್ಯಕ್ಷತೆ ವಹಿಸಲಿದ್ದಾರೆ. ಕುಡ್ತಮುಗೇರು ಪಂ. ಸದಸ್ಯ ಹರೀಶ್ ಮಂಕುಡೆ, ಶಿಕ್ಷಕ ವೆಂಕಟೇಶ್ ಅನಂತಾಡಿ, ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ ರಾಯಿ, ಉದ್ಯಮಿ ನವೀನ್ ರಾಧುಕಟ್ಟೆ, ಮಹಾವೀರ ಬ್ಯಾಂಕ್ ಪ್ರಬಂಧಕ ಪುಷ್ಪರಾಜ್ ಕುಕ್ಕಾಜೆ, ವಕೀಲೆ ವಿನೋದ ರವಿರಾಜ್ ಬಿ.ಸಿರೋಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಹಿಳಾ ಹಾಗೂ ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ಕ್ರೀಡಾಕೂಟ ನಡೆಯಲಿದೆ. ಬಂಟ್ವಾಳ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಡಿವಾಳ ಯುವ ಬಳಗ ಅಧ್ಯಕ್ಷ ಸಂದೇಶ್ ಕೊಯಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.