ಗಣೇಶ ವಿಗ್ರಹ ವಿಸರ್ಜನೆ ವೇಳೆ ಐವರು ಬಾಲಕರು ನೀರುಪಾಲು: ಇಬ್ಬರು ಮೃತ್ಯು.

ಮಧ್ಯ ಪ್ರದೇಶ: ಗಣೇಶನ ವಿಗ್ರಹ ವಿಸರ್ಜನೆ ವೇಳೆ ಇಬ್ಬರು ಹದಿಹರೆಯದ ಬಾಲಕರು ಹೊಳೆಗೆ ಬಿದ್ದು ಮುಳುಗಿ ಮೃತಪಟ್ಟ ಘಟನೆ ಶನಿವಾರ ರಾತ್ರಿ 8 ಗಂಟೆಗೆ ಮಧ್ಯ ಪ್ರದೇಶದ ರಾಯ್‌ಸೇನ್ ಜಿಲ್ಲೆಯ ಘಡಖೇಡ ಗ್ರಾಮದಲ್ಲಿ ನಡೆದಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರು ಅನುಜ್ ಸಾಹು (16) ನಿತಿನ್ ಸಾಹು (17)ಒಂದೇ ಕುಟುಂಬದ ಐವರು ಬಾಲಕರು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಹೋಗಿ ದುರಂತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಹೊಳೆಯ ಕಲ್ಲೊಂದರ ಮೇಲೆ ಅವರು ನಿಂತಿದ್ದಾಗ ಅದು ಉರುಳಿ ಬಿದ್ದು, ಐವರು ನೀರು ಪಾಲಾದರು ಎಂದು ಅವರು ಹೇಳಿದ್ದಾರೆ.

ಈ ವೇಳೆ ಕೆಲವು ಗ್ರಾಮಸ್ಥರು ಸ್ಥಳಕ್ಕೆ ತಲುಪಿ ಅವರನ್ನು ರಕ್ಷಿಸುವ ಕಾರ್ಯ ಪ್ರಾರಂಭಿಸಿದರು. ಸುಮಾರು ಒಂದು ಗಂಟೆಯ ನಂತರ ಅನುಜ್ ಸಾಹು (16) ಮೃತಶರೀರ ಪತ್ತೆಯಾಗಿದ್ದು, ನಿತಿನ್ ಸಾಹು (17) ಅವರನ್ನು ಮೇಲೆತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿ ಭೋಪಾಲ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಉಳಿದ ಮೂವರು ಬಾಲಕರು ಈಜಿ ದಡ ಸೇರಿದ್ದಾರೆ.