FTII ಸೊಸೈಟಿ ಅಧ್ಯಕ್ಷರಾಗಿ ಬಹುಭಾಷಾ ನಟ ಆರ್ ಮಾಧವನ್ ನೇಮಕ

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಶುಕ್ರವಾರ ನಟ ಆರ್ ಮಾಧವನ್ ಅವರನ್ನು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII) ಸೊಸೈಟಿಯ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.

ಮಾಜಿ ಅಧ್ಯಕ್ಷ ನಿರ್ದೇಶಕ ಶೇಖರ್ ಕಪೂರ್ ಅವರ ಅಧಿಕಾರಾವಧಿಯು ಈ ವರ್ಷದ ಮಾರ್ಚ್ 3 ರಂದು ಕೊನೆಗೊಂಡಿತು.

ಆರ್ ಮಾಧ್ವನ್ ಅವರನ್ನು ಎಫ್‌ಟಿಐಐ ಸೊಸೈಟಿಯ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ನಿರ್ಧಾರವನ್ನು ಸಚಿವಾಲಯವು ನಮಗೆ ಔಪಚಾರಿಕವಾಗಿ ತಿಳಿಸಿದೆ ಎಂದು ಎಫ್‌ಟಿಐಐ ರಿಜಿಸ್ಟ್ರಾರ್ ಸಯ್ಯದ್ ರಬೀಹಶ್ಮಿ ಹೇಳಿದ್ದಾರೆ.

ಮಾಧವನ್ ನಟನೆಯ ‘3 ಈಡಿಯಟ್ಸ್’, ‘ತನು ವೆಡ್ಸ್ ಮನು’ ಮತ್ತು ‘ರಂಗ್ ದೇ ಬಸಂತಿ’ಯಂತಹ ಚಿತ್ರಗಳು ಸೂಪರ್‌ಹಿಟ್ ಆಗಿವೆ. ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಚಿತ್ರದ ಮೂಲಕ ತಮ್ಮ ಚೊಚ್ಚಲ ನಿರ್ದೇಶನವನ್ನು ಮಾಡಿದ್ದು, ಕಳೆದ ವಾರ ಘೋಷಿಸಲಾದ 69 ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರ ಗೆದ್ದಿದೆ.