ಉಡುಪಿ: ಮಣಿಪಾಲದಿಂದ ಶಿರ್ವಕ್ಕೆ ಹಾದು ಹೋಗುವ 33 ಕೆ.ವಿ ಮಾರ್ಗದ ತಂತಿಗಳನ್ನು ಬದಲಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.80 ಕಾಮಗಾರಿಯು ಪೂರ್ಣಗೊಂಡಿದ್ದು, ಪ್ರಸ್ತುತ ಬಾಕಿ ಇರುವ ತಂತಿಗಳನ್ನು ಬದಲಿಸಲು ಕೇಮಾರಿನಿಂದ ಮಣಿಪಾಲಕ್ಕೆ ಹಾದುಹೋಗಿರುವ 110/33/11 ಕೆವಿ ಮಾರ್ಗವು ಮಣಿಪಾಲದಿಂದ ಶಿರ್ವ 33 ಕೆವಿ ಮಾರ್ಗದ ಮಧ್ಯದಲ್ಲಿ ಹಾದು ಹೋಗುವುದರಿಂದ, ಈ ಕಾಮಗಾರಿಯನ್ನು ನಿರ್ವಹಿಸಲು 110/33/11 ಕೆವಿ ವಿದ್ಯುತ್ ಸ್ಥಾವರ ಮಣಿಪಾಲದಿಂದ ಹೊರಡುವ 110 ಕೆ.ವಿ ಮಣಿಪಾಲ, ನಿಟ್ಟೂರು, ಬ್ರಹ್ಮಾವರ, 33 ಕೆ.ವಿ ಶಿರ್ವ, 33 ಕೆ.ವಿ ಕುಂಜಿಬೆಟ್ಟು 1 ಮತ್ತು 2 ಮಾರ್ಗಗಳಲ್ಲಿ, 33 ಕೆ.ವಿ ಮಲ್ಪೆ/ಉದ್ಯಾವರ ಹಾಗೂ ಎಲ್ಲಾ 11 ಕೆ.ವಿ ಫೀಡರಿನಲ್ಲಿ ಉಡುಪಿ, ಮಣಿಪಾಲ, ಕುಂಜಿಬೆಟ್ಟು, ನಿಟ್ಟೂರು, ಮಲ್ಪೆ, ಉದ್ಯಾವರ, ಶಿರ್ವ, ಬ್ರಹ್ಮಾವರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರ್ಚ್ 28 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.