ಮನೆಯ ಒಳಾಂಗಣದಲ್ಲಿ ಬೆಳೆಸುವ ಗಿಡಗಳು ಗಾಳಿಯಿಂದ ಹಾನಿಕಾರಕ ವಿಷವನ್ನು ಹೀರಿಕೊಳ್ಳುತ್ತವೆ ಎಂದು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ 1989 ರಲ್ಲಿ ಕಂಡುಕೊಂಡಿದೆ. ವಿಶೇಷವಾಗಿ ಕಡಿಮೆ ಗಾಳಿಯ ಹರಿವಿನೊಂದಿಗೆ ಸುತ್ತುವರಿದ ಸ್ಥಳಗಳಲ್ಲಿ ಈ ಗಿಡಗಳನ್ನು ಬೆಳೆಸುವುದು ಗಾಳಿಯನ್ನು ಶುದ್ದೀಕರಿಸುತ್ತದೆ ಎಂದು ನಾಸಾ ಕಂಡುಕೊಂಡಿದೆ. ಈ ಅಧ್ಯಯನವು ಒಳಾಂಗಣ ಸಸ್ಯಗಳು ಮತ್ತು ಅವುಗಳ ಗಾಳಿಯನ್ನು ಸ್ವಚ್ಛಗೊಳಿಸುವ ಸಾಮರ್ಥ್ಯಗಳ ಬಗ್ಗೆ ಹೊಸ ಅಧ್ಯಯನಗಳಿಗೆ ಆಧಾರವಾಗಿದೆ. ಸಸ್ಯಗಳು ಹೆಚ್ಚು ನೈಸರ್ಗಿಕ, ವೆಚ್ಚ ಪರಿಣಾಮಕಾರಿ ಮತ್ತು ಚಿಕಿತ್ಸಕ ವಾಯು ಶುದ್ದಿಕಾರಕಗಳಾಗಿವೆ.
ಒಳಾಂಗಣ ಸಸ್ಯಗಳ ಪ್ರಯೋಜನಗಳು
- ಮನಸ್ಥಿತಿಯನ್ನು ಸುಧಾರಿಸಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
- ಏಕಾಗ್ರತೆ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ
- ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.
- ಗಾಳಿಯನ್ನು ಶುದ್ದೀಕರಿಸುತ್ತವೆ.
ಪ್ರತಿ 100 ಚದರ ಅಡಿಗಳಿಗೆ 8 ರಿಂದ 10 ಇಂಚಿನ ಮಡಕೆಗಳಲ್ಲಿ ಎರಡು ಅಥವಾ ಮೂರು ಸಸ್ಯಗಳನ್ನು ಬೆಳೆಸಲು ನಾಸಾ ಶಿಫಾರಸು ಮಾಡುತ್ತದೆ. ಕೆಲವು ಸಸ್ಯಗಳು ಕೆಲವು ರಾಸಾಯನಿಕಗಳನ್ನು ಉತ್ತಮವಾಗಿ ತೆಗೆದುಹಾಕುತ್ತವೆ.
ಮನೆಯ ರಾಸಾಯನಿಕಗಳು ರತ್ನಗಂಬಳಿ, ಅಂಟುಗಳು, ಓವನ್ಗಳು, ಶುಚಿಗೊಳಿಸುವ ರಾಸಾಯನಿಕಗಳು, ಪ್ಲಾಸ್ಟಿಕ್, ಫೈಬರ್ ಮತ್ತು ರಬ್ಬರ್ನಂತಹ ಸಂಶ್ಲೇಷಿತ ವಸ್ತುಗಳಿಂದ ಬರುತ್ತವೆ.
ಒಳಾಂಗಣದಲ್ಲಿ ಬೆಳೆಯಬಹುದಾದ ಸಸ್ಯಗಳು
ಜೇಡ(ಸ್ಪೈಡರ್) ಸಸ್ಯ
ಏರ್ ಪ್ಲಾಂಟ್ ಎಂದೂ ಕರೆಯಲ್ಪಡುವ ಸ್ಪೈಡರ್ ಸಸ್ಯಗಳು ತ್ವರಿತವಾಗಿ ಬೆಳೆಯುತ್ತವೆ ಮತ್ತು ನೇತಾಡುವ ಬುಟ್ಟಿಗಳಲ್ಲಿ, ವಿಶೇಷವಾಗಿ ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾಣುತ್ತವೆ. ಕೆಲವೊಮ್ಮೆ ಇವು ಸುಂದರವಾದ ಬಿಳಿ ಹೂವುಗಳನ್ನು ಸಹ ಉತ್ಪಾದಿಸುತ್ತವೆ. ಸ್ಪೈಡರ್ ಸಸ್ಯಗಳು 200 ಕ್ಕೂ ಹೆಚ್ಚು ಜಾತಿಗಳನ್ನು ಹೊಂದಿವೆ. ಸಸ್ಯಗಳಿಗೆ ವಾರಕ್ಕೆ ಎರಡರಿಂದ ಮೂರು ಬಾರಿ ನೀರು ಹಾಕಿದರೆ ಸಾಕು. ಫಾರ್ಮಾಲ್ಡಿಹೈಡ್, ಕ್ಸೈಲೀನ್ ನಂತಹ ರಾಸಾಯನಿಕಗಳನ್ನು ತೆಗೆದುಹಾಕುತ್ತದೆ.
ಹಾವು (ಸ್ನೇಕ್) ಸಸ್ಯ
ನಿಮ್ಮ ಜಾಗದಲ್ಲಿ ಬಲವಾದ ರಕ್ಷಣಾತ್ಮಕ ಶಕ್ತಿಯನ್ನು ಒದಗಿಸಲು ಇದು ಹೆಸರುವಾಸಿಯಾಗಿದೆ, ಹಾವಿನ ಸಸ್ಯಗಳು ಅತ್ಯಂತ ಬಾಳಿಕೆ ಬರುವವು ಮತ್ತು ಬೆಳೆಸಲು ಬಹಳ ಕಡಿಮೆ ಗಮನ ಬೇಕಾಗುತ್ತದೆ. ಈ ಸಸ್ಯವು ವಿಶಿಷ್ಟವಾಗಿದೆ ಏಕೆಂದರೆ ಇದು ರಾತ್ರಿಯಲ್ಲಿ ಕಾರ್ಬನ್ ಡೈಆಕ್ಸೈಡ್ ಅನ್ನು ಆಮ್ಲಜನಕವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ, ಅಂದರೆ ನೀವು ಗಾಳಿಯ ಹರಿವು ಇಲ್ಲದ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಸುತ್ತಲೂ ಕೆಲವು ಹಾವಿನ ಸಸ್ಯಗಳನ್ನು ಇಟ್ಟಲ್ಲಿ ನಿಮ್ಮ ಜಾಗದಲ್ಲಿ ಆಮ್ಲಜನಕವನ್ನು ಸ್ವಚ್ಛಗೊಳಿಸಲು ಇದು ಸಹಾಯ ಮಾಡಬಹುದು!
ಬಿದಿರಿನ ಸಸ್ಯ
ಈ ಗಟ್ಟಿಮುಟ್ಟಾದ ಸಸ್ಯವು ಅದರ ಸುಲಭವಾದ ಸೊಬಗು ಮತ್ತು ಎತ್ತರಕ್ಕೆ ಹೆಸರುವಾಸಿಯಾಗಿದೆ. ಇದು ನೇರ ಸೂರ್ಯನ ಬೆಳಕನ್ನು ಇಷ್ಟಪಡುವುದಿಲ್ಲ ಮತ್ತು ಅದರ ಆರೈಕೆಯ ಬಗ್ಗೆ ಆದ್ಯತೆಗಳನ್ನು ಹೊಂದಿದೆ. ಬಿದಿರಿನ ಗಿಡಗಳು ತೇವಾಂಶದ ಆರೋಗ್ಯಕರ ಪ್ರಮಾಣವನ್ನು ಗಾಳಿಯಲ್ಲಿ ರವಾನಿಸುತ್ತವೆ, ಇದು ಶುಷ್ಕ ಚಳಿಗಾಲದ ತಿಂಗಳುಗಳಿಗೆ ಒಳಿತು. ಫಾರ್ಮಾಲ್ಡಿಹೈಡ್, ಬೆಂಜೀನ್, ಕಾರ್ಬನ್ ಮಾನಾಕ್ಸೈಡ್, ಕ್ಸೈಲೀನ್, ಕ್ಲೋರೊಫಾರ್ಮ್ ನಂತಹ ರಾಸಾಯನಿಕಗಳನ್ನು ತೊಡೆದುಹಾಕುತ್ತದೆ.
ಅಡಿಕೆ ಸಸ್ಯ
ಸಾಮಾನ್ಯವಾಗಿ ಈ ಸಸ್ಯವನ್ನು ಹೊರಾಂಗಣದಲ್ಲಿ ಬೆಳೆಯಲಾಗುತ್ತದೆ. ಆದರೆ ಪ್ರಕಾಶಮಾನವಾದ ಫಿಲ್ಟರ್ ಮಾಡಿದ ಬೆಳಕನ್ನು ಹೊಂದಿರುವ ಜಾಗವನ್ನು ಹೊಂದಿದ್ದರೆ, ಅದರ ಆಕರ್ಷಕವಾದ ಕಮಾನಿನ ಎಲೆಗಳು ಕೋಣೆಗೆ ಶೋಭೆ ನೀಡುತ್ತದೆ. ಬೆಳವಣಿಗೆಯ ಸಮಯದಲ್ಲಿ ಸಾಕಷ್ಟು ನೀರು ಬೇಕಾಗುತ್ತದೆ, ಆದರೆ ಚಳಿಗಾಲದಲ್ಲಿ ಕಡಿಮೆ ನೀರು ಸಾಕು. ಬೆಂಜೀನ್, ಕಾರ್ಬನ್ ಮಾನಾಕ್ಸೈಡ್, ಫಾರ್ಮಾಲ್ಡಿಹೈಡ್, ಟ್ರೈಕ್ಲೋರೋಎಥಿಲೀನ್, ಕ್ಸೈಲೀನ್ ರಾಸಾಯನಿಕ ತೊಡೆದು ಹಾಕುತ್ತದೆ.
ಸೇವಂತಿ ಸಸ್ಯ
ವಾಯು ಶುದ್ಧೀಕರಣಕ್ಕಾಗಿ ಅತ್ಯುನ್ನತ ಸ್ಥಾನವನ್ನು ಸೇವಂತಿ ಗಿಡಗಳು ಪಡೆದಿವೆ. ಸಾಮಾನ್ಯ ವಿಷಗಳು ಮತ್ತು ಅಮೋನಿಯಾವನ್ನು ತೊಡೆದುಹಾಕಲು ಅವುಗಳನ್ನು ಉಪಯೋಗಿಸಬಹುದು. ಹೂ ಬಿಡುವ ಸೇವಂತಿಗೆ ಸಸ್ಯಗಳನ್ನು ಒಳಾಂಗಣದಲ್ಲಿ ಬೆಳೆಸಿದರೆ ಉತ್ತಮ. ಹೂವಿಲ್ಲದ ಸಸ್ಯಗಳು ಗಾಳಿಯನ್ನು ಶುದ್ದೀಕರಿಸುವುದಿಲ್ಲ.
ರಬ್ಬರ್ ಸಸ್ಯ
ರಬ್ಬರ್ ಸಸ್ಯಗಳು ಭಾರತದ ನಿತ್ಯಹರಿದ್ವರ್ಣ ಮರಗಳಾಗಿವೆ. ಅವುಗಳ ಬೇರುಗಳು ಮೇಲಕ್ಕೆ ಬೆಳೆಯುತ್ತವೆ ಮತ್ತು ಆಗಾಗ್ಗೆ ಸಸ್ಯದ ಕಾಂಡದ ಸುತ್ತಲೂ ಸುತ್ತುವರಿದು ಆಸಕ್ತಿದಾಯಕ ಆಕಾರಗಳನ್ನು ರೂಪಿಸುತ್ತವೆ. ಈ ಸಸ್ಯಗಳು ಪ್ರಕಾಶಮಾನವಾದ, ಫಿಲ್ಟರ್ ಮಾಡಿದ ಬೆಳಕನ್ನು ಪ್ರೀತಿಸುತ್ತವೆ ಮತ್ತು ಆಗೀಗ ಸ್ವಲ್ಪ ಗಮನ ಸಾಕಾಗುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಮಣ್ಣಿನ ತೇವವನ್ನು ಇರಿಸಿಕೊಳ್ಳಲು ಸ್ವಲ್ಪ ನೀರು ಬೇಕಾಗುತ್ತದೆ. ಎಲೆಗಳನ್ನು ಕತ್ತರಿಸಿ ಸುಂದರವಾಗಿ ಕಾಣುವಂತೆ ಅವುಗಳನ್ನು ಒರೆಸುತ್ತಿದ್ದರೆ ಚೆನ್ನ.
ಮನಿ ಪ್ಲಾಂಟ್
ಎಲ್ಲಾ ಒಳಾಂಗಣ ಗಿಡಗಳಂತೆ ಮನಿ ಪ್ಲಾಂಟ್ ಕೂಡಾ ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಗಾಳಿಯಿಂದ ಬೆಂಜೀನ್, ಟೊಲುಯೆನ್, ಕ್ಸೈಲೀನ್ ಮತ್ತು ಫಾರ್ಮಾಲ್ಡಿಹೈಡ್ ಅನ್ನು ತೆಗೆದುಹಾಕಲು ಸಸ್ಯಗಳು ಸಹಾಯ ಮಾಡುತ್ತವೆ. ಇದು ನಿಮ್ಮ ಮನೆಯಲ್ಲಿ ಆಮ್ಲಜನಕದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ವಿ.ಸೂ: ಕೆಲವು ಸಸ್ಯಗಳು ಸಾಕು ಪ್ರಾಣಿಗಳಿಗೆ ಅಲರ್ಜಿಯನ್ನುಂಟು ಮಾಡಬಹುದು ಅಥವಾ ವಿಷಕಾರಿಯಾಗಿ ಪರಿಣಮಿಸಬಹುದು.
ಕೃಪೆ: ಹೆಲ್ತ್ ಲೈನ್