ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಮೂರುಕಾವೇರಿ ಎಂಬಲ್ಲಿ ಮೂಡಬಿದ್ರೆ ಮಾರ್ಗವನ್ನು ಕಟೀಲು ಮಾರ್ಗಕ್ಕೆ ಸಂಪರ್ಕಿಸುವ ಅಡ್ಡರಸ್ತೆಯ ಬಳಿ ಕಟೀಲು ಮಾರ್ಗಕ್ಕೆ ಸಾಗುತ್ತಿದ್ದ ಲಾರಿಯೊಂದಕ್ಕೆ ಕಿನ್ನಿಗೋಳಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಒಂದು ಢಿಕ್ಕಿ ಹೊಡೆದಿದೆ.
ಬಸ್ಸಿನ ಎದುರುಗಡೆ ಗಾಜು ಪುಡಿಯಾಗಿದ್ದರೂ, ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.