ಕಡಬ: ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ಪೇಜಾವರ ಮಠಾಧೀಶ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮಸ್ಥಳ ದ.ಕ. ಜಿಲ್ಲೆ ಕಡಬ ತಾಲೂಕು ರಾಮಕುಂಜ ಗ್ರಾಮದ ಹಳೆ ನೇರಂಕಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ನಿರ್ಮಾಣವಾಗಲಿರುವ ನೂತನ ಚಂದ್ರ ಮಂಡಲ ರಥಕ್ಕೆ ಶುಕ್ರವಾರ ದಾರು ಮುಹೂರ್ತ ನೆರವೇರಿತು.
ಉಡುಪಿ ಕೋಟೇಶ್ವರದ ಪ್ರಸಿದ್ಧ ರಥಶಿಲ್ಪಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರ ರಥ ಶಾಲೆಯಲ್ಲಿ ಈ ಮುಹೂರ್ತ ನಡೆಯಿತು. ಆಚಾರ್ಯರು ಮುಹೂರ್ತ ನೆರವೇರಿಸಿ ವೀಳ್ಯ ಸ್ವೀಕರಿಸಿದರು. ಅವರ ಪುತ್ರ ರಾಜಗೋಪಾಲ ಆಚಾರ್ಯ ಜೊತೆಗಿದ್ದರು. ದೇವಳದ ಪರವಾಗಿ ಪೇಜಾವರ ಮಠದ ದಿವಾನರಾದ ಎಂ ರಘುರಾಮಾಚಾರ್ಯ, ದೇವಳದ ಮೊಕ್ತೇಸರ ಹರಿನಾರಾಯಣ ಆಚಾರ್ಯ ವೀಳ್ಯ ಹಸ್ತಾಂತರಿಸಿದರು .
ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಮನೆಯ ಪಕ್ಕದಲ್ಲೇ ಈ ದೇವಳ ಇದ್ದು ದೇವಳದ ಆಡಳಿತವನ್ನೂ ಶ್ರೀಗಳ ಪೂರ್ವಾಶ್ರಮದ ಕುಟುಂಬಸ್ಥರೇ ನಡೆಸುತ್ತಿದ್ದಾರೆ.