ಜೂನ್ 14ರಿಂದ ಲಾಕ್ ಡೌನ್ ಸಡಿಲಿಕೆ: ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೊರೊನಾ ಇಳಿಕೆಯಾಗಿರುವ ರಾಜ್ಯದ 19 ಜಿಲ್ಲೆಗಳಲ್ಲಿ ಸೋಮವಾರ (ಜೂನ್ 14) ದಿಂದ ಲಾಕ್​ಡೌನ್ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಅನ್ ಲಾಕ್, ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಮಾರ್ಗಸೂಚಿ ಪ್ರಕಟಿಸಿದೆ.

ಯಾವುದಕ್ಕೆ ಅನುಮತಿ..?

ದಿನಸಿ ಖರೀದಿ ಅವಧಿ ಮಧ್ಯಾಹ್ನ 2ರವರೆಗೆ ವಿಸ್ತರಣೆ.
ಬೀದಿ ಬದಿ ವ್ಯಾಪಾರಕ್ಕೆ ಮಧ್ಯಾಹ್ನ 2ರವರೆಗೆ ಅವಕಾಶ.
ವೈನ್ ಶಾಪ್, ಬಾರ್‌ಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಮದ್ಯ ಪಾರ್ಸೆಲ್‌ಗೆ ಮಾತ್ರ ಅವಕಾಶ.
ಕಟ್ಟಡ ಕಾಮಗಾರಿ, ಸಾಮಗ್ರಿಗಳಿಗೆ ಸಂಪೂರ್ಣ ಅವಕಾಶ

ಕೈಗಾರಿಕೆಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಅವಕಾಶ
ಗಾರ್ಮೆಂಟ್ಸ್‌ಗಳಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಅವಕಾಶ
ಪಾರ್ಕ್‌ಗಳಲ್ಲಿ ಬೆಳಗ್ಗೆ 5ರಿಂದ 10ರವರೆಗೆ ಅವಕಾಶ
ಕಟ್ಟಡ, ಸಿಮೆಂಟ್, ಸ್ಟೀಲ್ ಅಂಗಡಿಗಳಿಗೆ ಅವಕಾಶ
ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರಿಗೆ ಮಾತ್ರ ಅವಕಾಶ
ಹೋಟೆಲ್‌, ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್‌ಗೆ ಅವಕಾಶ
ಹೋಮ್‌ ಡೆಲಿವರಿಗೆ 24 ಗಂಟೆಯೂ ಅವಕಾಶ

ನೈಟ್​ ಕರ್ಫ್ಯೂ ಮಾರ್ಗಸೂಚಿ:

ಸಂಜೆ 7ರಿಂದ ಬೆಳಗ್ಗೆ 5ರವರೆಗೆ ನೈಟ್​​ ಕರ್ಫ್ಯೂ ಜಾರಿ.
ತುರ್ತು ಆರೋಗ್ಯ ಸೇವೆಗೆ ಮಾತ್ರ ಅನುಮತಿ
ರಾತ್ರಿ ಪಾಳಿ ಕೆಲಸ ಮಾಡುವ ಸಂಸ್ಥೆಗಳಿಗೆ ಅವಕಾಶ
ಸಂಸ್ಥೆಯ ಐಡಿ ಕಾರ್ಡ್‌/ ಅನುಮತಿ ಪತ್ರ ಕಡ್ಡಾಯ

ಟೆಲಿಕಾಂ, ಇಂಟರ್ನೆಟ್‌ ಸೇವಾದಾರರಿಗೂ ಅನುಮತಿ
ಆಸ್ಪತ್ರೆ, ತುರ್ತು ಸೇವೆ, ಫಾರ್ಮಸಿಗೆ ಅನುಮತಿ
ಗೂಡ್ಸ್‌ ವಾಹನಗಳ ಓಡಾಟಕ್ಕೆ ನಿರ್ಬಂಧವಿಲ್ಲ
ರೈಲು, ವಿಮಾನ ಸೇವೆ ಪ್ರಯಾಣಿಕರಿಗೆ ಅನುಮತಿ
ನಿಲ್ದಾಣದಿಂದ ಆಟೋ, ಟ್ಯಾಕ್ಸಿ ಸೇವೆಗೆ ಅನುಮತಿ
ಆಯ್ದ ನಗರಗಳಲ್ಲಿ ಸಾರ್ವಜನಿಕ ಸಾರಿಗೆಗೆ ಅನುಮತಿ

ವೀಕೆಂಡ್ ಕರ್ಫ್ಯೂ ಮಾರ್ಗಸೂಚಿ:

ಶುಕ್ರವಾರ ಸಂಜೆ 7ರಿಂದ ವೀಕೆಂಡ್‌ ಕರ್ಫ್ಯೂ ಆರಂಭ, ಸೋಮವಾರ ಬೆಳಗ್ಗೆ 5 ರವರೆಗೆ ವೀಕೆಂಡ್‌ ಕರ್ಫ್ಯೂ.

ದಿನಸಿ ಖರೀದಿ ಅವಧಿ ಮಧ್ಯಾಹ್ನ 2ರವರೆಗೆ ವಿಸ್ತರಣೆ
ತುರ್ತು, ಅಗತ್ಯಸೇವೆಗೆ ಸಂಬಂಧಿಸಿದ ಕಚೇರಿ ಓಪನ್‌
ತುರ್ತು ಸೇವೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆಗಳೂ ಓಪನ್‌
ಆಸ್ಪತ್ರೆಗೆ ತೆರಳುವ ರೋಗಿಯ ಸಂಬಂಧಿಕರಿಗೆ ಅನುಮತಿ
ಟೆಲಿಕಾಂ, ಇಂಟರ್ನೆಟ್‌ ಸೇವಾದಾರರಿಗೂ ಅನುಮತಿ

ಹೋಟೆಲ್‌, ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್‌ಗೆ ಅನುಮತಿ
ರೈಲು, ವಿಮಾನ ಸೇವೆ ಪ್ರಯಾಣಿಕರಿಗೆ ಅನುಮತಿ
ನಿಲ್ದಾಣದಿಂದ ಆಟೋ, ಟ್ಯಾಕ್ಸಿ ಸೇವೆಗೆ ಅನುಮತಿ.