ವಿಶೇಷ:ಲಾಕ್ ಡೌನ್ ನಮ್ಮ ನಿದ್ದೆ ಮೇಲೆಯೂ ಪರಿಣಾಮವನ್ನು ಬೀರಿದ್ದು ಮಾನಸಿಕವಾಗಿಯೂ ಪರಿಣಾಮ ಬೀರಿರುವ ಕುರಿತು ಇದೀಗ ಅಧ್ಯಯನದಲ್ಲಿ ಬಹಿರಂಗವಾಗಿದೆ.ಹೌದು ಕೋವಿಡ್-19 ಲಾಕ್ ಡೌನ್ ಜನರ ನಿದ್ರೆಯ ಮೇಲೆ ಪರಿಣಾಮ ಬೀರಿದ್ದು, ರಾತ್ರಿ ಸಮಯದ ನಿದ್ರೆಯ ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಬದಲಾವಣೆಯಾಗಿರುವುದು ಹೃಷಿಕೇಶದ ಏಮ್ಸ್ ಮತ್ತಿತರ ದೇಶದಲ್ಲಿನ 25 ವೈದ್ಯಕೀಯ ಸಂಶೋಧನೆಗಳ ಅಧ್ಯಯನಗಳಿಂದ ಬಹಿರಂಗವಾಗಿದೆ.
ಲಾಕ್ ಡೌನ್ ಜಾರಿ ಹಾಗೂ ಲಾಕ್ ಡೌನ್ ನಂತರ ನಿದ್ರೆಯ ಗುಣಮಟ್ಟದಲ್ಲಿನ ಬದಲಾವಣೆ ಬಗ್ಗೆ ಕಳಪೆ ಗುಣಮಟ್ಟದ ನಿದ್ರೆ ಮಾಡಿದವರು, ಎರಡು ಅವಧಿಯಲ್ಲಿ ಉತ್ತಮ ಗುಣಮಟ್ಟದ ನಿದ್ರೆ ಮಾಡಿದವರು, ಕೊರತೆ ಅನುಭವಿಸಿದವರು ಅಥವಾ ಸುಧಾರಣೆಯಾದವರು ಎಂಬ ನಾಲ್ಕು ಹಂತಗಳಲ್ಲಿ ವಿಶ್ಲೇಷಣೆ ಮಾಡಲಾಗಿದೆ
ಮೇ ತಿಂಗಳ ಆರಂಭದಲ್ಲಿ ಪ್ರಸ್ತುತ ಮತ್ತು ಹಿಂದೆ ಮಾಡುತ್ತಿದ್ದ ನಿದ್ರೆಯ ವೇಳಾಪಟ್ಟಿ, ದಿನಚರಿ, ಕೆಲಸದ ರೀತಿ ಮತ್ತಿತರ ಪ್ರಶ್ನಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ್ದು, ಭಾರತ, ಯುಎಸ್ ಎ, ಇಂಗ್ಲೆಂಡ್, ಯುಎಇ, ಕೆನಡಾ, ಸಿಂಗಾಪೂರ್, ಜರ್ಮನಿ, ಆಸ್ಟ್ರೇಲಿಯಾ, ಕುವೈತ್ ಮತ್ತು ಕತ್ತಾರ್ ಸೇರಿದಂತೆ ಒಟ್ಟು 11 ರಾಷ್ಟ್ರಗಳಿಂದ ಭಾಗವಹಿಸಿದ್ದವರಿಂದ ಒಟ್ಟು 958 ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದಿದೆ.
ಸರ್ವೇ ಪ್ರಕಾರ ಲಾಕ್ ಡೌನ್ ಮುಂಚಿತ ದಿನಗಳಿಗೆ ಹೋಲಿಸಿದರೆ ಲಾಕ್ ಡೌನ್ ವೇಳೆಯಲ್ಲಿ ರಾತ್ರಿ ಮಲಗುವ ಸಮಯ ಹಾಗೂ ಬೆಳಗ್ಗೆ ಎಳುವ ಸಮಯದಲ್ಲಿ ಬದಲಾವಣೆಯಾಗಿದೆ.
ಇದು ವೃತ್ತಿಯಾಧಾರಿತ ಗುಂಪಿನ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಉಂಟು ಮಾಡಿದೆ. ಆದರೆ, ಆರೋಗ್ಯ ವೃತ್ತಿವರ್ಗದವರನ್ನು ಹೊರತುಪಡಿಸಿದಂತೆ ಇತರೆ ಕೆಲಸ ಮಾಡುವ ವ್ಯಕ್ತಿಗಳ ಮೇಲೂ ಹೆಚ್ಚಿನ ಪರಿಣಾಮ ಬೀರಿದೆ. ಎಲ್ಲಾ ವರ್ಗದ ಜನರಲ್ಲಿ ನಿದ್ರೆಯ ಗುಣಮಟ್ಟ ಕ್ಷೀಣಿಸಿದೆ. ಮಾನಸಿಕ ಖಿನ್ನತೆಯಿಂದಾಗಿ ನಿದ್ರೆಯ ಅವಧಿ ಕಡಿತವಾಗಿದೆ ಎಂಬುದನ್ನು
ಅಧ್ಯಯನದಲ್ಲಿ ಹೇಳಲಾಗಿದೆ.
ಅಧ್ಯಯನದಲ್ಲಿ ಹೇಳಲಾಗಿದೆ.