ರಾಯಚೂರು: ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಮೇ 16ರಿಂದ 18ರ ವರೆಗೆ ಪೂರ್ಣ ಪ್ರಮಾಣದ ಲಾಕ್ ಡೌನ್ ಘೋಷಿಸಿದ್ದು, ಹೀಗಾಗಿ ಮದ್ಯಪ್ರಿಯರು ಎಣ್ಣೆ ಖರೀದಿಗೆ ಮುಗಿಬಿದ್ದ ದೃಶ್ಯಗಳು ಅಲ್ಲಾಲ್ಲಿ ಕಂಡುಬಂತು.
ಈ ಮೊದಲು ಬೆಳಿಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳ ಜತೆಗೆ ಮದ್ಯ ಖರೀದಿಗೂ ಅವಕಾಶ ನೀಡಲಾಗಿತ್ತು. ಆದರೆ ಕೊರೊನಾ ನಿಯಂತ್ರಣಕ್ಕೆ ಬಾರದ ಕಾರಣಕ್ಕೆ ಮೂರು ದಿನ ಸಂಪೂರ್ಣ ಬಂದ್ ಆದೇಶ ಹೊರಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜನರು ಮೂರು ದಿನಕ್ಕೆ ಬೇಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ಖರೀದಿಸಿದರು.
ಎಂಎಸ್ ಐಎಲ್ ಸೇರಿದಂತೆ ಬಹುತೇಕ ಬಾರ್ ಮತ್ತು ವೈನ್ ಶಾಪ್ ಗಳ ಮುಂದೆ ಜನಸಂದಣಿ ಜೋರಾಗಿತ್ತು.