ಲಖನೌ: ಕೊರೊನಾ ಕೇಸ್ ಮಿತಿಮೀರಿದ್ದು, ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಭಾನುವಾರ ಮಾರುಕಟ್ಟೆಗಳನ್ನು ಮುಚ್ಚಲು ಹೇಳಿದ್ದು “ಸಂಡೇ ಲಾಕ್ ಡೌನ್” ಘೋಷಿಸಿದೆ.
ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ ಮಾಡಿದ್ದರೆ ಮೊದಲ ಬಾರಿ 1,000 ರೂ ಮತ್ತು ಎರಡನೇ ಬಾರಿಗಾದರೆ 10,000 ರೂ. ದಂಡ ವಿಧಿಸುವುದಾಗಿ ಪ್ರಕಟಿಸಿದೆ.
ನಿನ್ನೆ ಒಂದೇ ದಿನ ಉತ್ತರಪ್ರದೇಶದಲ್ಲಿ 22,439 ಹೊಸ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದ್ದು,104 ಸೋಂಕಿತರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.