ಡೇಟಿಂಗ್ ಆ್ಯಪ್ ಗಳಲ್ಲಿ ಸಂಗಾತಿಯನ್ನು ಹುಡುಕುವುದು ಮಹಾನ್ ನೀಚ ಕೆಲಸ: ಕಂಗನಾ ರಣಾವತ್

ಲಿವ್-ಇನ್ ಸಂಬಂಧಗಳು ಹೆಣ್ಣುಮಕ್ಕಳಿಗೆ ಯಾವುದೇ ಬೆಂಬಲ ನೀಡುವುದಿಲ್ಲ, ಸಾಂಪ್ರದಾಯಿಕ ವಿವಾಹ ಪದ್ಧತಿಯೇ ಉತ್ತಮ ಎಂದು ಕಂಗನಾ ಹೇಳಿದ್ದಾರೆ.

ಡೇಟಿಂಗ್ ಆ್ಯಪ್‌ ಬಳಸುವವರ ಬಗ್ಗೆ ಕಂಗನಾ ಟೀಕೆ:
ಡೇಟಿಂಗ್ ಆ್ಯಪ್‌ಗಳಲ್ಲಿ ಪಾರ್ಟ್ನರ್ ಹುಡುಕುವುದು ನೀಚ ಕೆಲಸ. ಡೇಟಿಂಗ್ ಆ್ಯಪ್‌ ಮತ್ತು ಅವುಗಳನ್ನು ಬಳಸುವವರ ಬಗ್ಗೆ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಟೀಕೆ ಮಾಡಿದ್ದು, ಈ ರೀತಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ಪಾರ್ಟ್ನರ್ ಹುಡುಕೋದು ನೀಚ ಕೆಲಸ ಅಂತ ಕಂಗನಾ ಹೇಳಿದ್ದಾರೆ.

ಡೇಟಿಂಗ್ ಆ್ಯಪ್‌ಗಳಲ್ಲಿ ಇರೋದಕ್ಕೆ ತಾನು ಎಂದಿಗೂ ಇಷ್ಟಪಟ್ಟಿಲ್ಲ. ಎಲ್ಲ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಿಗೂ ಅವಶ್ಯಕತೆಗಳಿರುತ್ತವೆ. ಆದರೆ ಅವುಗಳನ್ನು ಹೇಗೆ ಪೂರೈಸಿಕೊಳ್ಳೋದು ಅನ್ನೋದು ಪ್ರಶ್ನೆ. ಡೇಟಿಂಗ್ ಅಂತ ಯಾರನ್ನೋ ಹುಡುಕಿ ಪ್ರತಿ ರಾತ್ರಿ ಮನೆ ಬಿಟ್ಟು ಹೊರಗೆ ಹೋಗೋ ಭಯಾನಕ ಪರಿಸ್ಥಿತಿ ಇವತ್ತು ಇದೆ. ಸಾಮಾನ್ಯ ಜನ ಡೇಟಿಂಗ್ ಆ್ಯಪ್‌ಗಳಲ್ಲಿ ಇರೋದಕ್ಕೆ ಇಷ್ಟಪಡಲ್ಲ. ಆತ್ಮವಿಶ್ವಾಸ ಇಲ್ಲದ, ಜೀವನದಲ್ಲಿ ಸೋತವರು ಅಂತ ಭಾವಿಸುವ ಜನರನ್ನೇ ಈ ಪ್ಲಾಟ್‌ಫಾರ್ಮ್‌ಗಳು ಆಕರ್ಷಿಸುತ್ತವೆ ಅಂತ ಹೌಟರ್‌ಫ್ಲೈಗೆ ಕೊಟ್ಟ ಸಂದರ್ಶನದಲ್ಲಿ ಕಂಗನಾ ಅವರು ಹೇಳಿದ್ದಾರೆ.

ಮದುವೆ ಸಂಬಂಧ ಒಳ್ಳೆಯದು:
ಕೆಲಸದ ಜಾಗ, ಕಾಲೇಜು, ಅಥವಾ ಕುಟುಂಬ ಹುಡುಕಿ ಕೊಡುವವರು ಅನ್ನೋ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ಸಂಬಂಧ ಹುಡುಕೋದೇ ಒಳ್ಳೆಯದು. ಹೆಂಡತಿಗೆ ನಿಷ್ಠೆ ಇರಬೇಕು ಅನ್ನೋ ಗಂಡಿನ ಪ್ರಮಾಣದ ಮುಖ್ಯ ಭಾಗ ಮದುವೆ ಅಂತ ಕಂಗನಾ ಅಭಿಪ್ರಾಯಪಟ್ಟಿದ್ದಾರೆ.

ಲಿವ್-ಇನ್ ಸಂಬಂಧಗಳು ಒಳ್ಳೆಯದಲ್ಲ:
ಲಿವ್-ಇನ್ ಸಂಬಂಧಗಳ ಹೆಚ್ಚುತ್ತಿರುವ ಟ್ರೆಂಡ್ ಬಗ್ಗೆ ಅವರು ಟೀಕೆ ಮಾಡಿದ್ದಾರೆ. ಲಿವ್-ಇನ್ ಸಂಬಂಧಗಳು ಹೆಣ್ಣುಮಕ್ಕಳಿಗೆ ಯಾವುದೇ ರೀತಿಯ ಬೆಂಬಲ ಅಥವಾ ಪ್ರಯೋಜನ ಕೊಡಲ್ಲ ಅಂತ ತನ್ನ ಅನುಭವ ಮತ್ತು ಇತರರನ್ನು ಗಮನಿಸಿದ್ದರಿಂದ ತಿಳಿದುಬಂದಿದೆ. ಲಿವ್-ಇನ್‌ ರಿಲೇಶನ್‌ಶಿಪ್‌ನಲ್ಲಿ ಗರ್ಭಿಣಿಯಾದರೆ, ಗರ್ಭಪಾತ ಮಾಡಿಸಿಕೊಳ್ಳೋಕೆ ಅಥವಾ ಮಗುವನ್ನು ನೋಡಿಕೊಳ್ಳೋಕೆ ಯಾರೂ ಇರಲ್ಲ. ಯಾವುದೇ ಹೆಣ್ಣನ್ನು ಗರ್ಭಿಣಿ ಮಾಡಿ ಓಡಿಹೋಗುವಂತಹ ಗಂಡಸರು ಕೆಟ್ಟ ಮನಸ್ಥಿತಿಯವರು ಅಂತ ಕಂಗನಾ ಆರೋಪಿಸಿದ್ದಾರೆ.