₹25 ಕೋಟಿ ಮೌಲ್ಯದ ಮದ್ಯ ವಶಕ್ಕೆ: ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆ

ಮೈಸೂರು: ನಂಜನಗೂಡಿನಲ್ಲಿರುವ ಕಂಪನಿ ತಯಾರಿಸಿದ್ದ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಕಂಡುಬಂದಿದೆ. ಕಂಪನಿಯ ಸ್ಟ್ರಾಂಗ್ ಹಾಗೂ ಅಲ್ಟ್ರಾ ಲ್ಯಾಗರ್ ಈ ಅಂಶ ಗೋಚರಿಸಿದ್ದು, 7e ಮತ್ತು 7c ನಮೂನೆಯ (ದಿನಾಂಕ 15-07-23ರಂದು) ಬಾಟಲಿಂಗ್‌ನಲ್ಲಿರುವುದು ತಿಳಿದುಬಂದಿದೆ.
ಮದ್ಯಪ್ರಿಯರ ನೆಚ್ಚಿನ ಬಿಯರ್‌ ಬ್ರ್ಯಾಂಡ್‌ವೊಂದರಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ. ಹೀಗಾಗಿ, 25 ಕೋಟಿ ರೂಪಾಯಿ ಮೌಲ್ಯದ 78,678 ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿರುವ ಮೈಸೂರು ಅಬಕಾರಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರತಿಷ್ಠಿತ ಬ್ರ್ಯಾಂಡ್​ವೊಂದರ ಬಿಯರ್​ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದ್ದು ಕಂಪನಿಯ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ.

ಅಬಕಾರಿ ಇಲಾಖೆಯ ಉಪ ಆಯುಕ್ತ ಎ.ರವಿಶಂಕರ್ ಪ್ರತಿಕ್ರಿಯಿಸಿ, “ಕಂಪನಿಯವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್‌ಹೌಸ್ ಕೆಮಿಸ್ಟ್ ಅವರು ಕೊಟ್ಟಿರುವ ವರದಿಯಲ್ಲಿ ಈ ಬಿಯರ್ ಅನ್ನು ಮನುಷ್ಯರು ಕುಡಿಯಲು ಯೋಗ್ಯವಲ್ಲ ಎಂದು ಬಂದಿರುವ ವರದಿ ಆದರಿಸಿ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.ಮಾಹಿತಿ ತಿಳಿದ ಕೂಡಲೇ ಬಿಯರ್ ಮಾದರಿಯನ್ನು ಕೆಮಿಕಲ್ ಲ್ಯಾಬ್​ಗೆ ಕಳುಹಿಸಲಾಗಿತ್ತು. ಈ ಕುರಿತು (2-08-2023ರಂದು) ಕೆಮಿಕಲ್ ವರದಿ ಬಂದಿದ್ದು ‘ಅನ್‌ಫಿಟ್ ಫಾರ್ ಹ್ಯುಮನ್ ಕನ್ಸಂಪ್ಷನ್’ ಎಂದು ತಿಳಿಸಲಾಗಿದೆ. ಇದೇ ಅವಧಿಯಲ್ಲಿ ಒಟ್ಟು‌ 78,678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಅಷ್ಟೊತ್ತಿಗೆ ಎಲ್ಲ ಬಾಕ್ಸ್​ಗಳನ್ನೂ ತಡೆಹಿಡಿಯಲಾಗಿದೆ. ಕೆಲವು ಡಿಪೋದಿಂದ ಅಂಗಡಿಗಳಿಗೂ ವಿತರಣೆಯಾಗಿತ್ತು. ರಿಟೈಲ್‌ನಲ್ಲೂ ಮಾರಾಟವಾಗದಂತೆ ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರಿಸದ ಕಂಪನಿಯ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ.