ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ಲಿಪ್ಪನ್ ಆರ್ಟ್ ಕುರಿತ ಸಮರ್ ಕ್ಯಾಂಪ್ ನ್ನು ಮೇ 16ರಂದು ಶನಿವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಮಣಿಪಾಲದ ಈಶ್ವರ್ ನಗರದಲ್ಲಿರುವ MSDC-Orane, 3ನೇ ಮಹಡಿಯಲ್ಲಿಆಯೋಜಿಸಲಾಗಿದೆ. ಸೃಜನಾತ್ಮಕ ಕಲೆಯನ್ನು ಕಲಿಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಕಲಾಭಿಮಾನಿಗಳಿಗೆ ಈ ಶಿಬಿರ ಉತ್ತಮ ಅವಕಾಶವಾಗಲಿದೆ.
ಶಿಬಿರದಲ್ಲಿ “ಬನ್ನಾ ಬನ್ನಿ” ಫ್ರಿಡ್ಜ್ ಮ್ಯಾಗ್ನೆಟ್ ತಯಾರಿ ಹಾಗೂ ಬುದ್ಧ ವಾಲ್ ಡೆಕೋರ್ ಆರ್ಟ್ ಕಲಿಕೆಗೆ ಅವಕಾಶವಿದೆ. “Create. Reflect. Shine!” ಎಂಬ ಸಂದೇಶದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅಗತ್ಯ ವಸ್ತುಗಳು ಹಾಗೂ ಆಹಾರದ ವ್ಯವಸ್ಥೆ ಮಾಡಲಾಗಿದೆ. ಶಿಬಿರ ಶುಲ್ಕ ರೂ.1,200 ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8123165068 ಸಂಖ್ಯೆಯನ್ನು ಸಂಪರ್ಕಿಸಿ

















