ಲಯನ್ಸ್ ಕ್ಲಬ್ ಲಕ್ಷ್ಯ ಹಾಗೂ ಯುಕ್ತಿ ವತಿಯಿಂದ ಹೊಸ ಬೆಳಕು ವೃದ್ಧಾಶ್ರಮಕ್ಕೆ ಸ್ಟೀಲ್ ಪ್ಲೇಟ್ ಹಸ್ತಾಂತರ

ಉಡುಪಿ: ರಂಗನಪಲ್ಕೆ ಪಳ್ಳಿಯಲ್ಲಿರುವ ಹೊಸ ಬೆಳಕು ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಹಾಗೂ ಲಯನ್ಸ್ ಕ್ಲಬ್ ಯುಕ್ತಿ ಮಣಿಪಾಲದ ವತಿಯಿಂದ ಸುಮಾರು 18 ಸಾವಿರ ರೂಪಾಯಿ ಮೌಲ್ಯದ ಸ್ಟೀಲ್ ಪ್ಲೇಟ್ ಗಳನ್ನು ಹಸ್ತಾಂತರಿಸಲಾಯಿತು.

ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯದ ಸ್ಥಾಪಕಾಧ್ಯಕ್ಷ ಹಾಗೂ ಲಯನ್ಸ್ ಜಿಲ್ಲೆ 317 C ಇದರ ಸಂಪುಟ ಕಾರ್ಯದರ್ಶಿ ಲಯನ್ ರವಿರಾಜ್ ನಾಯಕ್, ಅಧ್ಯಕ್ಷ ಲಯನ್ ಧನುಶ್ ಕೆ., ಖಜಾಂಚಿ ಸತೀಶ್ ರಾವ್, ನಿಕಟಪೂರ್ವ ಕಾರ್ಯದರ್ಶಿ ಕವನಾ ರವಿರಾಜ್, ಉಪಾಧ್ಯಕ್ಷೆ ತಾರಾ ಆಚಾರ್ಯ, ಲಯನ್ಸ್ ಕ್ಲಬ್ ಮಣಿಪಾಲ್ ಯುಕ್ತಿ ಇದರ ಮಾಜಿ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ, ಲಂಡನ್ ನಿವಾಸಿಗಳಾಗಿದ್ದು, ಲಯನ್ ರವಿರಾಜ್ ನಾಯಕ್ ರವರ ಆಪ್ತರೂ, ಕೊಡುಗೈ ದಾನಿಗಳೂ ಆಗಿರುವ ಮದನ್ ವೇಲು ಧನಲಕ್ಷ್ಮಿ ದಂಪತಿಗಳು ಉಪಸ್ಥಿತರಿದ್ದರು.