ಮುಂಬೈ: ಗ್ರಾಹಕರ ಸೇವೆ ನೀಡಲು ನಿರ್ಲಕ್ಷಸಿದ, ಗ್ರಾಹಕರು ಕರೆದ ಕಡೆಗೆ ಸೇವೆ ನೀಡಲು ನಿರಾಕರಿಸಿದ ಆಟೋ-ರಿಕ್ಷಾ ಚಾಲಕರ ವಿರುದ್ಧ ಕಠಿಣ ಕ್ರಮಕ್ಕೆ ಮಹಾರಾಷ್ಟ್ರದ ಸಾರಿಗೆ ಇಲಾಖೆ ಮುಂದಾಗಿದ್ದು 918 ಪರವಾನಗಿಯನ್ನು ರದ್ದು ಮಾಡಿದೆ.
ಗ್ರಾಹಕರಿಗೆ ಸೇವೆ ನಿರಾಕರಿಸಿದ 918 ಆಟೋ ಚಾಲಕರ ಚಾಲನಾ ಪರವಾನಗಿಯನ್ನೇ ರದ್ದುಗೊಳಿಸಿದೆ. ಇದೊಂದು ಮಹಾರಾಷ್ಟ್ರ ಸಾರಿಗೆ ಇಲಾಖೆ ಕೈಗೊಂಡ ದಿಟ್ಟ ಕ್ರಮಗಳಲ್ಲಿ ಒಂದಾಗಿದೆ. .
ಮುಂಬೈ ಮತ್ತು ಥಾಣೆಗಳಲ್ಲಿ ಇದುವರೆಗೂ ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆಯಲಾದ ಡ್ರೈವಿಂಗ್ ಲೈಸನ್ಸ್ಗಳನ್ನು ರದ್ದುಗೊಳಿಸಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಗ್ರಾಹಕರು ಕರೆದ ಕಡೆ ಬಾರದೇ ಇರುವ ಆಟೋ ಚಾಲಕರ ಲೈಸನ್ಸ್ ರದ್ದುಗೊಳಿಸಲಾಗಿದೆ.