ಮಂಗಳೂರು: ಎಲ್.ಐ.ಸಿ ವತಿಯಿಂದ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್.ಐ.ಸಿ ಮಂಗಳೂರು ಪ್ರಥಮ ಶಾಖೆಯ ಅಭಿವೃದ್ಧಿ ಅಧಿಕಾರಿ ಜಗದೀಶ್ ವಿ ಗೋಳಿ ಅವರನ್ನು ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಶಾಖೆಯ ಹಿರಿಯ ಪ್ರಬಂಧಕ ತುಳಸೀದಾಸ್ ವಿ.ಪವಸ್ಕರ್ ಮಾತನಾಡಿ, ಜೀವವಿಮಾ ನಿಗಮದ ಬೆಳವಣಿಗೆಯಲ್ಲಿ ಜಗದೀಶ್ ಅವರ ಕೊಡಗೆ ಅಪಾರ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಜಗದೀಶ್.ವಿ.ಗೋಳಿ ದಂಪತಿ ಮತ್ತು ಮಕ್ಕಳನ್ನು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡುವ ಮೂಲಕ ಸನ್ಮಾನಿಸಿ ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಶ್.ವಿ.ಗೋಳಿ, “ಸಂಸ್ಥೆಯಿಂದ ನಾನು ಬಹಳಷ್ಟು ಅನುಭವಗಳನ್ನು ಪಡೆದುಕೊಂಡಿದ್ದೇನೆ. ವೃತ್ತಿಜೀವನದಲ್ಲಿ ತೃಪ್ತಿ, ನೆಮ್ಮದಿ, ಸ್ನೇಹಗಳಿಸಲು ಸಂಸ್ಥೆಯು ಒಳ್ಳೆಯ ಅವಕಾಶ ನೀಡಿದೆ” ಎಂದರು.
ಉಪಪ್ರಬಂಧಕ ದೀಪಕ್ ವಿ ಹಾಗೂ ಸಂಸ್ಥೆಯ ಏಜೆಂಟ್ ಗಳು ಉಪಸ್ಥಿತರಿದ್ಧರು. ಕಿಶೋರ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ವಪ್ನ.ಎಸ್. ಶೆಟ್ಟಿ ವಂದಿಸಿದರು.