ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತ ‘ಎಲ್​ಜಿಎಂ’:ಧೋನಿ ಅಭಿಮಾನಿಗಳಿಗೆ ನಿರಾಸೆ

ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್ ನಿರ್ಮಾಣದ ಮೊದಲ ಚಿತ್ರ ‘ಲೆಟ್ಸ್ ಗೆಟ್​ ಮ್ಯಾರೀಡ್’ (ಎಲ್‌ಜಿಎಂ) ಜುಲೈ 28 ರಂದು ತೆರೆ ಕಂಡಿದೆ. ‘ಎಲ್​​ಜಿಎಂ’ ತಮಿಳು ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮೈದಾನದಲ್ಲಿ ಬ್ಯಾಟ್​ ಹಿಡಿದು ಫೋರ್​, ಸಿಕ್ಸ್​ ಬಾರಿಸುತ್ತಿದ್ದ ನಾಯಕ ಎಂಎಸ್​ ಧೋನಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ.ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತ ‘ಎಲ್​ಜಿಎಂ’: ಎಲ್‌ಜಿಎಂ ಸಿನಿಮಾಗೆ ಸಂಬಂಧಿಸಿದಂತೆ ಟೀಸರ್​, ಟ್ರೇಲರ್​ ಮತ್ತು ಪೋಸ್ಟರ್​ಗಳು ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು.

ಅದಕ್ಕಿಂತ ಮುಖ್ಯವಾಗಿ ಧೋನಿ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದರಿಂದ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಎಲ್‌ಜಿಎಂ ಜುಲೈ 28 ರಂದು ತೆರೆ ಕಂಡಿದ್ದು, ಚಿತ್ರ ವಿಮರ್ಶೆಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ನಿರೀಕ್ಷಿತ ಮಟ್ಟದಲ್ಲಿ ಅಭಿಮಾನಿಗಳನ್ನು ಮೆಚ್ಚಿಸಿಲ್ಲ ಎಂಬುದು ವಿಮರ್ಶೆಗಳಿಂದ ಸ್ಪಷ್ಟವಾಗಿದೆ.

ಭಾರತದ ಯಶಸ್ವಿ ಕ್ರಿಕೆಟ್​ ಆಟಗಾರ ಮಹೇಂದ್ರ ಸಿಂಗ್​​ ಧೋನಿ ಅವರು ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಜುಲೈ 28 ರಂದು ತೆರೆ ಕಂಡ ಎಂಎಸ್​ ಧೋನಿ ನಿರ್ಮಾಣದ ‘ಲೆಟ್ಸ್ ಗೆಟ್​ ಮ್ಯಾರೀಡ್’ (ಎಲ್‌ಜಿಎಂ) ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ.

ಹೌದು, ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಥೆ ಮತ್ತು ಚಿತ್ರಕಥೆ ಸಾಧಾರಣವಾಗಿದೆ ಎಂದು ಚಿತ್ರ ಪ್ರೇಮಿಗಳು ಟ್ವೀಟ್​ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯೋಗಿ ಬಾಬು ಅವರ ಕಾಮಿಡಿ ಮಾತ್ರ ಅದ್ಭುತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರಿಗಾಗಿ ಮಾತ್ರ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಬಹುದು ಎನ್ನುತ್ತಿದ್ದಾರೆ.​

ಇದರಿಂದಾಗಿ ಲಾಂಗ್​ ರನ್​ ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಕಡಿವಾಣ ಬೀಳುವ ಸಾಧ್ಯತೆಗಳೂ ಇವೆ. ಒಟ್ಟಿನಲ್ಲಿ ‘ಲೆಟ್ಸ್ ಗೆಟ್​ ಮ್ಯಾರೀಡ್’ ಸಿನಿಮಾ ಧೋನಿ ಅಭಿಮಾನಿಗಳಿಗಂತೂ ನಿರಾಸೆ ಮೂಡಿಸಿದೆ. ಈ ಚಿತ್ರವು ತೆಲುಗಿನಲ್ಲಿ ಆಗಸ್ಟ್ 4 ರಂದು ಬಿಡುಗಡೆಯಾಗಲಿದೆ.
ಚಿತ್ರದ ಕಥೆಯು ವಿಶಿಷ್ಟವಾಗಿದೆ ಮತ್ತು ಇದೊಂದು ಕೌಟುಂಬಿಕ ಸಿನಿಮಾವಾಗಿದೆ. ಮೀರಾ (ಇವಾನಾ) ತನ್ನ ಸಹುದ್ಯೋಗಿ ಗೌತಮ್ (ಹರೀಶ್) ನೊಂದಿಗೆ ಪ್ರೀತಿಯಲ್ಲಿ ಬೀಳುವ ಕಥೆಯಿದು.

ಅವಿಭಕ್ತ ಕುಟುಂಬ, ಮದುವೆಗೆ ಒಪ್ಪಿಸಲು ಗೌತಮ್ ಪ್ರಯತ್ನ, ಎಲ್ಲರನ್ನು ಒಪ್ಪಿಸಿ ಅವರು ಹೇಗೆ ಮದುವೆಯಾದರು? ಆ ಅವಿಭಕ್ತ ಕುಟುಂಬದಲ್ಲಿರಲು ಮೀರಾ ಒಪ್ಪಿದರೇ? ಈ ಎಲ್ಲ ಇಂಟ್ರೆಸ್ಟಿಂಗ್​ ವಿಷಯಗಳನ್ನು ಸಿನಿಮಾ ಒಳಗೊಂಡಿದೆ. ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾವನ್ನು ರಮೇಶ್ ತಮಿಳ್ಮಣಿ ನಿರ್ದೇಶಿಸಿದ್ದಾರೆ.

ಎಲ್​ಜಿಎಂ ಚಿತ್ರತಂಡ ಹೀಗಿದೆ.. ಇನ್ನು ಎಲ್​ಜಿಎಂ ಚಿತ್ರಕ್ಕೆ ವಿಶ್ವಜಿತ್​ ಸಂಗೀತ ನಿರ್ದೇಶನ ಮಾಡುತ್ತಿದ್ದು, ಪ್ರದೀಪ್​ ರಾಗವ್​ ಸಂಕಲನವಿದೆ. ನಟ ಹರೀಶ್ ಕಲ್ಯಾಣ್ ಮತ್ತು ಇವಾನಾ ಪ್ರಮುಖ ಪಾತ್ರದಲ್ಲಿದ್ದಾರೆ. ಇವರಲ್ಲದೇ, ಹಿರಿಯ ನಟಿ ನದಿಯಾ, ಯೋಗಿ ಬಾಬು, ಆರ್‌ಜೆ ವಿಜಯ್, ವಿಟಿವಿ ಗಣೇಶ್, ದೀಪಾ ಮತ್ತು ವೆಂಕಟ್ ಪ್ರಭು ಕೂಡ ನಟಿಸಿದ್ದಾರೆ.