ಪೆರ್ಡೂರು: ಇಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿದ್ದ ಹೆಣ್ಣು ಚಿರತೆಯೊಂದನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪೆರ್ಡೂರು ಪರಿಸರದಲ್ಲಿ ಕಳೆದ ಮೂರು ದಿನಗಳಿಂದ ಚಿರತೆಯೊಂದು ಆತಂಕ ಸೃಷ್ಟಿಸಿತ್ತು.
ಮೂರು ದಿನಗಳ ಹಿಂದಷ್ಟೇ ಚಿರತೆಯ ಮರಿಯೊಂದನ್ನು ಹಿಡಿದು ಆಗುಂಬೆ ಕಾಡಿನಲ್ಲಿ ಬಿಡಲಾಗಿತ್ತು. ಅದರ ತಾಯಿ ತನ್ನ ಮರಿಯನ್ನರಸಿಕೊಂಡು ಪೆರ್ಡೂರು ಪರಿಸರದಲ್ಲಿ ಅಡ್ಡಾಡುತ್ತಿತ್ತು. ಇದರಿಂದಾಗಿ ಇಲ್ಲಿನ ಪರಿಸರದ ಜನರಲ್ಲಿ ಆತಂಕ ಮನೆ ಮಾಡಿತ್ತು.
ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನು ಇರಿಸಿದ್ದರು. ಇದೀಗ ಚಿರತೆಯು ಬೋನಿನೊಗಳೆ ಬಿದ್ದಿದ್ದು, ಜನತೆ ನಿರಾಳತೆಯ ನಿಟ್ಟುಸಿರು ಬಿಟ್ಟಿದ್ದಾರೆ.