ಶತಕ ಸಿಡಿಸಿದ ಎಡಗೈ ಬ್ಯಾಟ್ಸ್​ಮನ್:​ ಚೊಚ್ಚಲ ಟೆಸ್ಟ್​ನಲ್ಲೇ ಯಶಸ್ವಿ ಜೈಸ್ವಾಲ್‌

ಹೈದರಾಬಾದ್: ಡೊಮಿನಿಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನದಂದು ಯಶಸ್ವಿ ಜೈಸ್ವಾಲ್‌ ಅಜೇಯ 143 ರನ್ ಗಳಿಸಿದರು. ವೆಸ್ಟ್ ಇಂಡೀಸ್‌ನ 150ಕ್ಕೆ ಪ್ರತ್ಯುತ್ತರವಾಗಿ, ಭಾರತವು 312/2ಕ್ಕೆ ಆರಾಮವಾಗಿ ಸಿದ್ಧವಾಯಿತು. ಜೈಸ್ವಾಲ್ ಜೊತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಸಾಥ್​ ನೀಡಿದ್ದಾರೆ.ಯುವ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್‌ಗೆ ಮುಂಬೈನಲ್ಲಿ ಪಾನಿಪುರಿ ಮಾರಾಟ ಮಾಡುವುದರಿಂದ ಹಿಡಿದು ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಸೇರುವವರೆಗಿನ ಇದು ಸುದೀರ್ಘ ಹಾಗೂ ಪ್ರಯಾಸಕರವಾದ ಪ್ರಯಾಣ ಆಗಿದೆ. ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ 17ನೇ ಭಾರತೀಯ ಬ್ಯಾಟ್ಸಮನ್​ ಎಂಬ ಹೆಗ್ಗಳಿಕೆಗೆ ಯಶಸ್ವಿ ಜೈಸ್ವಾಲ್‌ ಅವರು ಪಾತ್ರರಾಗಿದ್ದಾರೆ.
ಭಾರತ ತಂಡದಲ್ಲಿ ಆಡುವ ತನ್ನ ಕನಸನ್ನು ಮುಂದುವರಿಸಲು, ಉತ್ತರ ಪ್ರದೇಶದಿಂದ ಬಂದ ಎಡಗೈ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್ ಮುಂಬೈಗೆ ತೆರಳಿದರು. ಅಲ್ಲಿ ಅವರು ಜೀವನಕ್ಕಾಗಿ ಪಾನಿಪುರಿ ಮಾರಾಟ ಮಾಡಿದರು. ಕ್ರಿಕೆಟ್ ಅಕಾಡೆಮಿಯನ್ನು ನಡೆಸುತ್ತಿರುವ ಜ್ವಾಲಾ ಸಿಂಗ್ ಅವರ ಮಾರ್ಗದರ್ಶನದಲ್ಲಿ, ಜೈಸ್ವಾಲ್ ದಕ್ಷಿಣ ಆಫ್ರಿಕಾದಲ್ಲಿ ಜೂನಿಯರ್ ವಿಶ್ವಕಪ್ ಆಡಿದ ಭಾರತದ 19ವರ್ಷದೊಳಗಿನ ತಂಡದಲ್ಲಿ ಸ್ಥಾನ ಪಡೆದರು.

ಜೈಸ್ವಾಲ್ ಉತ್ತಮ ಸಾಧನೆ: ಸುರೇಶ್ ರೈನಾ, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ (ಲಾರ್ಡ್ಸ್ 1996), ಪ್ರವೀಣ್ ಆಮ್ರೆ (ಡರ್ಬನ್ 1992), ಸುರೀಂದರ್ ಅಮರನಾಥ್ ಮತ್ತು ಅಬ್ಬಾಸ್ ಅಲಿ ಬೇಗ್ ಅವರ ನಂತರ ಜೈಸ್ವಾಲ್ ಅವರು ಏಳನೇ ಭಾರತೀಯ ಬ್ಯಾಟ್ಸ್​ಮನ್​ ಆಗಿದ್ದಾರೆ. 13 ವರ್ಷಗಳ ಅವಧಿಯಲ್ಲಿ ಪದಾರ್ಪಣೆ ಮಾಡಿದ ಟೆಸ್ಟ್​ನಲ್ಲಿ ಶತಕ ಗಳಿಸಿದ ಮೊದಲ ಆಟಗಾರರಾದರು. 2010ರಲ್ಲಿ ಶ್ರೀಲಂಕಾ ವಿರುದ್ಧ 120 ರನ್ ಗಳಿಸಿದ ಭಾರತದ ಸುರೇಶ್ ರೈನಾ, ಚೊಚ್ಚಲ ಟೆಸ್ಟ್​ನಲ್ಲಿ ಶತಕ ಗಳಿಸಿದ ಕೊನೆಯ ಭಾರತೀಯ ಬ್ಯಾಟ್ಸ್​​ಮನ್​ ಆಗಿದ್ದಾರೆ. ನಂತರದ ಸ್ಥಾನವನ್ನು ಜೈಸ್ವಾಲ್ ಆಕ್ರಮಿಸಿಕೊಂಡಿದ್ದಾರೆ.

ಜೈಸ್ವಾಲ್​ ಎಂಬ ಅಸಾಧಾರಣ ಪ್ರತಿಭೆ: ಭಾರತಕ್ಕಾಗಿ ಆಡುವ ಗುರಿ ಹೊಂದಿರುವ ಇತರ ಎಲ್ಲ ಆಟಗಾರರಂತೆ, ಉತ್ತರ ಪ್ರದೇಶದಿಂದ ಎಡಗೈ ಬ್ಯಾಟರ್ ಜೈಸ್ವಾಲ್ ತಮ್ಮ ಕನಸನ್ನು ಮುಂದುವರಿಸಲು ಮೆಗಾಸಿಟಿ ಮುಂಬೈಗೆ ವಲಸೆ ಬಂದರು. ಆದರೆ, ಜೈಸ್ವಾಲ್‌ಗೆ ಮಹಾನಗರದಲ್ಲಿ ಜೀವನ ಸುಲಭವಾಗಿರಲಿಲ್ಲ. ಎಲ್ಲ ವಿರೋಧಗಳನ್ನು ಎದುರಿಸುತ್ತಾ ಅವರು ಪ್ರಯಾಣವನ್ನು ಆರಂಭಿಸಿದರು. ದಕ್ಷಿಣ ಮುಂಬೈನ ಮೇಡನ್(ನೆಲ)ದಲ್ಲಿ ಟೆಂಟ್‌ನಲ್ಲಿ ಉಳಿದುಕೊಂಡರು. ಜೀವನಕ್ಕಾಗಿ ಪಾನಿಪುರಿ ಮಾರಾಟ ಮಾಡಿದ್ದರು.

ಇದರ ಮಧ್ಯೆ, ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ರಮಾಕಾಂತ್ ಅಚ್ರೇಕರ್​ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಗುರುವಾಗಿರುವಂತೆ, ಯಶಸ್ವಿ ಜೈಸ್ವಾಲ್ ಅವರು ತಮ್ಮ ಗುರುವಾಗಿ ಜ್ವಾಲಾ ಸಿಂಗ್‌ ಅವರನ್ನು ಸ್ವೀಕರಿಸಿದರು. ಮುಂಬೈನ ಉಪನಗರದ ಸಾಂತಾಕ್ರೂಜ್‌ನಲ್ಲಿರುವ ಏರ್ ಇಂಡಿಯಾ ಮೈದಾನದಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ನಡೆಸುತ್ತಿರುವ ಜ್ವಾಲಾ ಸಿಂಗ್, ಜೈಸ್ವಾಲ್‌ನಲ್ಲಿ ಅಸಾಧಾರಣ ಪ್ರತಿಭೆ ಗುರುತಿಸಿ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿದರು. ಅವರ ಗುರು ಹೇಳಿದಂತೆಯೇ ಜೈಸ್ವಾಲ್‌ ಇತಿಹಾಸವನ್ನು ನಿರ್ಮಿಸಿದ್ದಾರೆ.

ಅಪರೂಪದ ಮೈಲಿಗಲ್ಲನ್ನು ಸಾಧಿಸಿದ ಇತರ ಮುಂಬೈ ಬ್ಯಾಟ್ಸ್​ಮನ್​ಗಳಲ್ಲಿ ರೋಹಿತ್ ಶರ್ಮಾ, ಪೃಥ್ವಿ ಶಾ (2018 ರಾಜ್‌ಕೋಟ್ ವೆಸ್ಟ್ ಇಂಡೀಸ್ ವಿರುದ್ಧ) ಮತ್ತು ಶ್ರೇಯಸ್ ಅಯ್ಯರ್ (2021 ನ್ಯೂಜಿಲೆಂಡ್ ವಿರುದ್ಧ ಕಾನ್ಪುರ). ಕಾಕತಾಳೀಯ ಎಂಬಂತೆ ಜೈಸ್ವಾಲ್ ಮೂರು ಅಂಕಿಗಳ ಗಡಿಯನ್ನು ತಲುಪಿದಾಗ ರೋಹಿತ್ ಶರ್ಮಾ ಉತ್ಸಾಹ ಮತಷ್ಟು ಹೆಚ್ಚಿಸಿದೆ. ಭಾರತ ತಂಡದ ನಾಯಕ ರೋಹಿತ್​ ಕೂಡಾ ಶತಕ ಗಳಿಸಿದರು.

ದೇಶೀಯ ಕ್ರಿಕೆಟ್​​ನಲ್ಲೂ ಮಿಂಚು: ಜ್ವಾಲಾ ಅವರು ಜೈಸ್ವಾಲ್​ಗೆ ಕ್ರಿಕೆಟ್​ ಅಂಗಳದಲ್ಲಿ ವರ್ಷಗಳ ಕಾಲ ಕಠಿಣ ಅಭ್ಯಾಸಗಳನ್ನು ಮಾಡಿಸಿದರು. ಬಳಿಕ ಜೈಸ್ವಾಲ್ ಅವರಿಂದ ಉತ್ತಮ ಫಲಿತಾಂಶಗಳು ಹೊರಗೆ ಬರಲು ಆರಂಭಿಸಿದವು. ಜೈಸ್ವಾಲ್ ವಯೋಮಾನದ ಕ್ರಿಕೆಟ್‌ನಲ್ಲಿ ಪ್ರಕಾಶಮಾನವಾಗಿ ಮಿಂಚಲು ಪ್ರಾರಂಭಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ ಭಾರತದ 19 ವರ್ಷದೊಳಗಿನ ತಂಡಕ್ಕೆ ಮಾಡಿದ ಕೆಲವು ಸೊಗಸಾದ ಪ್ರದರ್ಶನಗಳ ಹಿನ್ನೆಲೆಯಲ್ಲಿ, ಜೈಸ್ವಾಲ್ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಪ್ರಮುಖ ರನ್ ಸ್ಕೋರರ್ ಆಗಿ ಹೊರಹೊಮ್ಮಿದರು. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆಯ್ಕೆ ಸಮಿತಿಯ ಎದರು ಮಿಂಚತೊಡಗಿದರು.

ಮೂರನೇ ಭಾರತೀಯ ಆರಂಭಿಕ ಆಟಗಾರವೆಂಬ ಹೆಗ್ಗಳಿಕೆ: ಅವರು ರಾಜಸ್ಥಾನ ರಾಯಲ್ಸ್‌ಗಾಗಿ ಆಡಿದ ಐಪಿಎಲ್‌ನಲ್ಲಿ ಅವರ ಪ್ರದರ್ಶನದ ನಂತರ, ಜೈಸ್ವಾಲ್‌ಗೆ ಅವಕಾಶ ಪಕ್ಕಾ ಆಯಿತು. ನಂತರ ಜೈಸ್ವಾಲ್​ ಎರಡೂ ಕೈಗಳಿಂದ ಅವಕಾಶವನ್ನು ಬಾಚಿ ತಬ್ಬಿಕೊಂಡರು. ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಗಳಿಸಿದ ಮೂರನೇ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಜೈಸ್ವಾಲ್ ಅವರು, ಅದನ್ನು ತಮ್ಮ ಪೋಷಕರಿಗೆ ಅರ್ಪಿಸಿದರು. ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಇತರ ಇಬ್ಬರು ಭಾರತೀಯ ಆರಂಭಿಕರೆಂದರೆ ಶಿಖರ್ ಧವನ್ ಮತ್ತು ಪೃಥ್ವಿ ಶಾ.

ಜೈಸ್ವಾಲ್ ಪ್ರಕಾರ, ಇದು ಕೇವಲ ಪ್ರಾರಂಭವಾಗಿದೆ. ಇವರು ಎಡಗೈ ಬ್ಯಾಟ್ಸ್​ಮನ್​ ಎನ್ನುವ ಮುಂಬೈ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಇದು ಅಜಿತ್ ವಾಡೇಕರ್, ಸುನಿಲ್ ಗವಾಸ್ಕರ್, ಸುಧೀರ್ ನಾಯ್ಕ್, ದಿಲೀಪ್ ವೆಂಗ್‌ಸರ್ಕರ್, ಸಚಿನ್ ತೆಂಡೂಲ್ಕರ್, ಸಂದೀಪ್ ಪಾಟೀಲ್, ವಿನೋದ್ ಕಾಂಬ್ಳಿ, ರೋಹಿತ್ ಶರ್ಮಾ ಸೇರಿದಂತೆ ದೇಶೀಯ ದಿಗ್ಗಜರನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ.
ನನ್ನ ಹೆತ್ತವರಿಗೆ ಈ ಶತಕ ಅರ್ಪಿಸಲು ಬಯಸುತ್ತೇನೆ: “ಖಂಡಿತ, ಇದು ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಭಾವನಾತ್ಮಕವಾಗಿ ಧನ್ಯವಾದ ಅರ್ಪಿಸಿದರು” ಎಂದು ಜೈಸ್ವಾಲ್ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. “ಏಕೆಂದರೆ ಇದು ಸುದೀರ್ಘ ಪ್ರಯಾಣವಾಗಿದೆ. ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಜೀವನದಲ್ಲಿ ದೊಡ್ಡ ಕೊಡುಗೆ ನೀಡಿದ ನನ್ನ ಹೆತ್ತವರಿಗೆ ಈ ಶತಕ ಅರ್ಪಿಸಲು ಬಯಸುತ್ತೇನೆ” ಎಂದು ಯಶಸ್ವಿ ಜೈಸ್ವಾಲ್‌ ಸಂತಸ ಪಟ್ಟರು