ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಇ.ಪಿ ಕುರಿತು ಉಪನ್ಯಾಸ ಕಾರ್ಯಕ್ರಮ

ಶಾರದಾ ರೆಸಿಡೆನ್ಶಿಯಲ್ ಶಾಲೆ ಹಾಗೂ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 7 ರಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಡಯಟ್ ಪ್ರಾಂಶುಪಾಲ ಹಾಗೂ ಬಿಇಒ(ಪ್ರಭಾರ) ಡಾ. ಅಶೋಕ್ ಕಾಮತ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಹೊಸ ಶಿಕ್ಷಣ ನೀತಿಯ ಗುರಿ, ಅನುಕೂಲಗಳು, ಶಾಲಾ ಶಿಕ್ಷಣದಲ್ಲಿ ಇದುವರೆಗಿದ್ದ 10+2 ಮಾದರಿಯನ್ನು ಮಾರ್ಪಡಿಸಿ,3 ರಿಂದ 18 ವಯೋಮಾನದವರೆಗೆ 5+3+3+4 ಮಾದರಿಯಲ್ಲಿ ಬೋಧನಾ ಕ್ರಮ ಹಾಗೂ ಶಿಕ್ಷಣ ಮರು ವಿನ್ಯಾಸ ಮಾಡಿರುವುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಸರ್ವ ಸಮಾವಿಷ್ಟ ಮತ್ತು ಸಮಾನವಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹಾಗೂ ಕಲಿಕೆಯ ಸದವಕಾಶಗಳ ಬಗ್ಗೆ, ವಿದ್ಯಾರ್ಥಿಗಳ ಅಭಿವೃದ್ದಿಗೆ ಕಾರಣವಾಗುವ ಪಠ್ಯಕ್ರಮ-ಪ್ರಾಯೋಗಿಕ ವಿಜ್ಞಾನ ಮತ್ತು ಗಣಿತಗಳ ಜೊತೆಯಲ್ಲಿ ಮೂಲ ಕಲಾ ವಿಷಯಗಳು, ಕ್ರೀಡೆ, ಭಾಷೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳ ಬಗ್ಗೆ ವಿವರಿಸಿದರು.

ಸಂಸ್ಥೆಯ ನಿರ್ದೇಶಕ ವಿದ್ಯಾವಂತ ಆಚಾರ್ಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ, ಶಿಕ್ಷಕ ವೃಂದದವರಿಗೆ ಈ ನೀತಿಯ ಬಗ್ಗೆ ಅರಿವಿರುವುದು ಅತ್ಯಗತ್ಯ ಎಂದರು.

ಶಾರದಾ ವಸತಿ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿಕೋಸ್ಟಾ ಉಪಸ್ಥಿತರಿದ್ದರು. ನಲ್ವತ್ತಕ್ಕೂ ಹೆಚ್ಚು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಶಾರದಾ ಪ.ಪೂ ಕಾಲೇಜಿನ ಪ್ರಾಂಶುಪಾಲ ರಘುಪತಿ ನಕ್ಷತ್ರಿ ವಂದಿಸಿದರು, ಉಪಪ್ರಾಂಶುಪಾಲೆ ಶ್ರೀಮತಿ ಯಶಾ ಕೆ. ಎಸ್ ಕಾರ್ಯಕ್ರಮ ನಿರೂಪಿಸಿದರು.