ನ.11 ರಂದುಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದತ್ತಿ ಉಪನ್ಯಾಸ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಹಕಾರದಲ್ಲಿ ದಿ. ಪುಳಿಮಾರು ಎಂ. ಕೃಷ್ಣ ಶೆಟ್ಟಿ ಸ್ಮಾರಕ ದತ್ತಿ ಉಪನ್ಯಾಸ ಹಾಗೂ ಯಕ್ಷಪ್ರೇಮಿ ನಾರಾಯಣ ಸ್ಮಾರಕ ದತ್ತಿ ಪುರಸ್ಕಾರ ಸಮಾರಂಭವನ್ನು ನವೆಂಬರ್ 11, ಶನಿವಾರದಂದು 10.30ಕ್ಕೆ ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡಿನಲ್ಲಿ ನಡೆಸಲಾಗುವುದು.

ಪ್ರಸಿದ್ಧ ಉರಗ ತಜ್ಞ ಗುರುರಾಜ್ ಸನಿಲ್ ಉಪನ್ಯಾಸವನ್ನು ನೀಡಲಿದ್ದಾರೆ ಹಾಗೂ ಇದೇ ಸಂದರ್ಭದಲ್ಲಿ ಯಕ್ಷಪ್ರೇಮಿ ನಾರಾಯಣ ಸ್ಮರಣಾರ್ಥ ದತ್ತಿ ಪುರಸ್ಕಾರವನ್ನು ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ನಿರುಪಮಾ ಪ್ರಮೋದ್ ತಂತ್ರಿಯವರಿಗೆ ನೀಡಿ ಗೌರವಿಸಲಾಗುವುದು ಎಂದು ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.