ಮಣಿಪಾಲದ  MSDC  ಯಲ್ಲಿ ಜಪಾನೀಸ್ ಕಲಿಯಿರಿ, ಜಾಗತಿಕ ಮಟ್ಟದಲ್ಲಿ ಮಿಂಚಿ, ಆನ್‌ಲೈನ್ ಜಪಾನೀಸ್ ಭಾಷಾ ಕೋರ್ಸ್‌ಗೆ ಶೇ.50 ರವರೆಗೆ ರಿಯಾಯಿತಿ

ಮಣಿಪಾಲ: ಜಪಾನೀಸ್ ಭಾಷೆ ಕಲಿಯಲು ಆಸಕ್ತಿ ಹೊಂದಿರುವವರಿಗೆ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ (MSDC), ಚುವೊ ಪಬ್ಲಿಷಿಂಗ್ ಕಂಪನಿ ಹಾಗೂ ಕೆಟಿಸಿ ಇಂಡಿಯಾ ಸ್ಕಿಲ್ಸ್ ಅಂಡ್ ನ್ಯೂಟ್ರಿಷನ್ ಸೆಂಟರ್‌ ಸಹಯೋಗದಲ್ಲಿ ಆನ್‌ಲೈನ್‌ ವೀಕೆಂಡ್‌ ಬ್ಯಾಚ್‌ನ N5 ಜಪಾನೀಸ್ ಭಾಷಾ ಕೋರ್ಸ್‌ ಆರಂಭಿಸಲಾಗುತ್ತಿದೆ.

ಕೋರ್ಸ್‌ನ ಸಾಮಾನ್ಯ ಶುಲ್ಕ ₹20,000 ಆಗಿದ್ದು, ವಿಶೇಷ ರಿಯಾಯಿತಿ ದರದಲ್ಲಿ ಅರ್ಹ ಅಭ್ಯರ್ಥಿಗಳಿಗೆ ₹10,000ಕ್ಕೆ ಕೋರ್ಸ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಅಂದರೆ ಶೇ.50ರಷ್ಟು ರಿಯಾಯಿತಿ ಲಭ್ಯವಿದೆ.

MSDC ಸಿಬ್ಬಂದಿ, ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಿಬ್ಬಂದಿ, MAHE ಸಿಬ್ಬಂದಿ, ಡಾ. ಟಿ.ಎಂ.ಎ. ಪೈ ಫೌಂಡೇಶನ್ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ವಿದ್ಯಾರ್ಥಿಗಳು ಶೇ.50ರ ರಿಯಾಯಿತಿಗೆ ಅರ್ಹರಾಗಿರುತ್ತಾರೆ.

ಇತರ ಎಲ್ಲ ಅರ್ಜಿದಾರರಿಗೆ ಸಾಮಾನ್ಯ ₹20,000 ಶುಲ್ಕದ ಬದಲಿಗೆ ₹15,000ಕ್ಕೆ ಕೋರ್ಸ್ ಪಡೆಯಬಹುದಾಗಿದೆ. ಇವರಿಗೆ ಶೇ.25ರಷ್ಟು ರಿಯಾಯಿತಿ ನೀಡಲಾಗಿದೆ.

ಆನ್‌ಲೈನ್‌ನಲ್ಲಿ ವಾರಾಂತ್ಯದ ತರಗತಿಗಳು ನಡೆಯಲಿದ್ದು, ಜಪಾನೀಸ್ ಭಾಷೆಯ ಮೂಲಭೂತ ಜ್ಞಾನ ಪಡೆದುಕೊಳ್ಳಲು ಹಾಗೂ ಮುಂದಿನ ದಿನಗಳಲ್ಲಿ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಬಳಸಿಕೊಳ್ಳಲು ಈ ಕೋರ್ಸ್‌ ಸಹಕಾರಿಯಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ 8123165069 ಸಂಖ್ಯೆಯನ್ನು ಸಂಪರ್ಕಿಸಬಹುದು. ಪೋಸ್ಟರ್‌ನಲ್ಲಿರುವ QR ಕೋಡ್‌ ಸ್ಕ್ಯಾನ್ ಮಾಡುವ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದಾಗಿದೆ.